ವಿಜಯದಾಸ

ಅಡಿಗಳಿಗೊಂದಿಪೆ ಪುರಂದರಗುರುವೆ

ಅಡಿಗಳಿಗೊಂದಿಪೆ ಪುರಂದರಗುರುವೆ ||ಪ|| ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ|| ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ಗುರು ವ್ಯಾಸರಾಯರಿಂದುಪದೇಶಗೊಂಡೆ ಎರಡೆರಡು ಲಕ್ಷದಿಪ್ಪತ್ತೈದು ಸಾವಿರ ವರನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||೧|| ಗಂಗಾದಿ ಸಕಲ ತೀರ್ಥಂಗಳ ಚರಿಸಿದೆ ರಂಗವದನ ವೇದವ್ಯಾಸನ ಹಿಂಗದೆ ಮನದಲ್ಲಿ ನೆನೆದು ನೆನೆದು ಮೆರೆವ ಮಂಗಳಮಹಿಮೆಯ ನುತಿಸಿ ನುತಿಸಿ ನಾ ||೨|| ನಿನ್ನತಿಶಯಗುಣ ವರ್ಣಿಸಲಳವಲ್ಲ ನಿನ್ನ ಸೇವಕನ ಸೇವಕನೆಂತೆಂದು ಪನ್ನಗಶಯನ ಮುಕುಂದ ಕರುಣ ಪ್ರ- ಸನ್ನ ವಿಜಯವಿಠಲ ಸಂಪನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂತರಂಗದ ಕದವು ತೆರೆಯಿತಿಂದು

ಅಂತರಂಗದ ಕದವು ತೆರೆಯಿತಿಂದು ||ಪ|| ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ|| ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇಂದಿನ ತನಕ ತಮಸಿನ ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧|| ಹರಿಕರುಣವೆಂಬ ಕೀಲಿಕೈ ದೊರಕಿತು ಗುರುಕರುಣವೆಂಬಂಥ ಶಕ್ತಿಯಿಂದ ಪರಮಭಾಗವತರ ಸಹವಾಸದಲಿ ಪೋಗಿ ಹರಿಸ್ಮರಣೆಯಿಂದಲ್ಲಿ ಬೀಗವ ತೆಗೆದೆ ||೨|| ಸುತ್ತಲಿದ್ದವರು ಪಲಾಯನವಾದರು ಭಕ್ತಿಕಕ್ಕಡವೆಂಬ ಜ್ಞಾನದೀಪ ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ ಎತ್ತನೋಡಿದರತ್ತ ಶೃಂಗಾರಸದನ ||೩|| ಹೊರಗೆ ದ್ವಾರವು ನಾಲ್ಕು , ಒಳಗೈದು ದ್ವಾರಗಳು ಪರ ದಾರಿಗೆ ಪ್ರಾಣ ಜಯವಿಜಯರು ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ ಸರಸಿಜನಾಭನ ಅರಮನೆಯ ಸೊಬಗು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕ್ಷೀರವಾರಿಧಿ ಕನ್ನಿಕೆ

ಕ್ಷೀರವಾರಿಧಿ ಕನ್ನಿಕೆ ಮಾರ ಜನಕೆ ಈರೇಳು ಲೋಕ ನಾಯಿಕೆ ವಾರವಾರಕೆ ಆರಾಧಿಪುದಕೆ ಚಾರು ಮನಸು ಕೊಡು ದೂರ ನೋಡದಲೆ ಶ್ರೀಧರ ದುರ್ಗ ಆಂಬ್ರಣಿ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತಭಿಮಾನಿ ವಾರಿಜಪಾಣಿ ಆದಿಮಧ್ಯಾಂತ ಗುಣ ಶ್ರೇಣಿ ಸಾಧು ಜನರ ಹೃದಯಾಬ್ಜವಿರಾಜಿತೇ ಖೇದಗೊಳಿಪ ಕಾಮ ಕ್ರೋಧಗಳೋಡಿಸಿ ನೀದಯದಲಿ ಮೇಲಾದಗತಿಗೆ ಪಂಚಬೇಧಮತಿಯ ಕೊಡು ಮಾಧವ ಪ್ರಿಯಳೇ ಶ್ರೀ ಮಾಯಾ ಜಯಾ ಕೃತಿ ಶಾಂತಿ ದೇವಿ ಜಯಂತಿ ನಾಮದಲಿಪ್ಪ ಜಯವಂತಿ ಕೋಮಲವಾದ ವೈಜಯಂತಿ ಧರಿಸಿದ ಶಾಂತಿ-ಸೋಮಾರ್ಕ ಕೋಟಿಮಿಗೆ ಕಾಂತಿ ತಾಮರಸಾಂಬಿಕೆ ರಾಮ ಲಕುಮಿ ಸತ್ಯಭಾಮೆ ಭವಾರಣ್ಯ ಧೂಮಕೇತಳೇ ಯಾಮಯಾಮಕೆ ಹರಿನಾಮವ ನುಡಿಸುತ್ತಮರೊಡನೆ ಪರಿಣಾಮವ ನೀವುದು ನಾನಾ ಭರಣ ಭೂಷಿತೆ ಧಾರುಣಿಜಾತೆ ಜ್ಞಾನಿಗಳ ಮನೋಪ್ರೀತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೈಲಾಸ ವಾಸ

ರಾಗ : ಕಾಂಬೋದಿ ತಾಳ : ಖಂಡಛಾಪು ಕೈಲಾಸವಾಸ ಗೌರೀಶ ಈಶಾ.. ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ... ಶಂಭೋ..... || ಅಹೋರಾತ್ರಿಯಲಿ ನಾನು ಅನುಜರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೋ ಮಹದೇವನೇ.. ಅಹಿಭೂಷಣನೆ ಎನ್ನ ಅವಗುಣಗಳೆಣಿಸದೆಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸದಾ ಎನ್ನ ಹೃದಯದಲ್ಲಿ.........

ರಾಗ : ದರ್ಬಾರ್ ಕಾನಡ ತಾಳ : ರೂಪಕ ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ.. ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ..... ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ... ವೇಣುಗಾನ ಲೋಲನ ಕುಳ್ಳಿರಿಸಿ ಙ್ಞಾನದಿಂದ ಭಜಿಸುವೇನೋ..... || ಸದಾ...||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ತುಳಸಿಯಾ ಸೇವಿಸಿ

ತುಳಸಿಯ ಮಹಿಮೆಯನ್ನು ಕೊಂಡಾಡುವ ಈ ಹಾಡನ್ನು ರಾಗಗಳ ಮಾಲಿಕೆಯಿಂದ ಪೋಣಿಸಿ ಹಲವಾರು ಶ್ರೋತೃಗಳನ್ನು ಪ್ರೀತಗೊಳಿಸಿ ’ತುಳಸೀ ಕೃಷ್ಣಮೂರ್ತಿಗಳು’ ಎಂದೇ ಪ್ರಖ್ಯಾತರಾದ ಶ್ರೀ ಬಿ.ಎಸ್.ಕೃಷ್ಣಮೂರ್ತಿಗಳಿಗೆ ನನ್ನ ಅನಂತ ವಂದನೆಗಳು. ಸ್ತೋತ್ರ: ಉದಯರಾಗ ರಾಗ: ಭೂಪಾಳಿ ----------------
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಡಗಿದನೊ ಹರಿ, ಎನ್ನಯ ದೊರಿ

ತೋಡಿ ರಾಗ, ಆದಿ ತಾಳ ಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪಲ್ಲವಿ|| ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನ ಅಲ್ಲಲ್ಲಿ ಪುಸಿಮಾಡಿ ಫುಲ್ಲಲೋಚನ ಕೃಷ್ಣ ||೧|| ಶರಣೆಂದವರ ಕಾಯ್ವ ಕರುಣ ಸಮುದ್ರನು ಕರುಣವನರಿಯದೆ ಹರಿಣಾಂಕ ನಿಭವ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪವಮಾನ ಪವಮಾನ ಜಗದ ಪ್ರಾಣ

ರಾಗ: ತೋಡಿ ತ್ರಿವಿಡಿ ತಾಳ ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಒಬ್ಬ ಸತಿ ಪತಿಗಾಗಿ

ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ ಅಬ್ಜ ಬಾಂಧವನ ನಿಲಿಸಿದಳು ನೋಡಾ ಒಬ್ಬ ಸತಿ ಪತಿಗಾಗಿ ಧರ್ಮನ ಸಭೆಯ ಸಾರಿ ನಿಬ್ಬರದಿ ಪ್ರಾಣವ ಪಡೆದಳು ನೋಡಾ ಒಬ್ಬ ಸತಿ ಪತಿಗಾಗಿ ಚಿತ್ರಗುಪ್ತರು ಆಡಿದ ಶಬ್ದ ಆಲಿಸಿ ಐದೆತನ ಪಡೆದಳು ಊರ್ವಿಯೊಳಗೀಪರಿ ಸತಿಯರ ಸ್ವಧರ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು