ಪುರಂದರದಾಸ

Compositions of Purandara dasa

ಮಾತಾಪಿತರು ನಿನಗಂದೆ ಮಾರಿದರೆನ್ನ

ಮಾತಾಪಿತರು ನಿನಗಂದೆ ಮಾರಿದರೆನ್ನ ನಾಥನೆ ನೀನೆನ್ನ ಸಲಹದಿದ್ದರೆ ದೇವ ಏತಕೆ ಭಕ್ತವತ್ಸಲನೆನಿಸಿಕೊಂಡೆ ನಾ ತಡೆಯೆನೊ ನಿನ್ನ ಬಿರುದಿಗಂಜುವನಲ್ಲ ಸಾತ್ವಿಕ ದೈವವೆ ಸಲಹೊ ಎನ್ನ ಪ್ರಖ್ಯಾತಪುರುಷ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಳೀಯನಂತೆ ಕಟ್ಟಿ ಬಿಗಿಯಬೇಕು

ಕಾಳೀಯನಂತೆ ಕಟ್ಟಿ ಬಿಗಿಯಬೇಕು ಬಲಿಯಂತೆ ನಿನ್ನ ಬಾಗಿಲ ಕಯಿಸಲಿಬೇಕು ಕುಬ್ಜೆಯಂತೆ ನಿನ್ನ ರಟ್ಟುಬುತ್ತು ಮಾಡಿ ಮುಂಜೆರಗ ಪಿಡಿದು ಗುಂಬೆ ಹಾಕಿಸಬೇಕು ಪುರಂದರವಿಠಲ ನಿನ್ನ ಅಟಿಮುಟ್ಟಿ ಹಾಕೆಂದರೆ ಪುಟ್ಟದು ರವಿ ತಿರಿತಿಂಬಂತೆ ಮಾಡುವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಲಿಯಂತೆ ಮುಕುಟವ

ಬಲಿಯಂತೆ ಮುಕುಟವ ಕದ್ದುಕೊಂಡೋಡಬೇಕು ವಾಲಿಯಂತೆ ನಿನ್ನ ಮೂದಲಿಸಬೇಕು ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು ಪುರಂದರವಿಠಲ ನಿನ್ನ ನಂಬಿರಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾವ ದೈವವು ನೀನೆ ಕೈಮುಗಿವೆನು ನಾನು

ಕಾವ ದೈವವು ನೀನೆ ಕೈಮುಗಿವೆನು ನಾನು ಕೈವಲ್ಯ ಫಲದಾತ ಕೇಶವನೆ ರಘುನಾಥ ಯಾವ ದೈವಕಿನ್ನು ಈ ವೈಭವಗಳ ಕಾಣೆ ರಾವಣಾಂತಕ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿರಿ ಚತುರ್ಮುಖ ಸುರರು

ಸಿರಿ ಚತುರ್ಮುಖ ಸುರರು ಮನು ಮುನಿಗಳು ಮನುಜೋತ್ತಮರು ತಾರತಮ್ಯಯುಕ್ತರು ಪುರಂದರವಿಠಲನ ಸದಾಶರಣರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ನಾಮಭಾಂಡಾರ ಕದ್ದ ಕಳ್ಳನು ನಾನು

ನಿನ್ನ ನಾಮಭಾಂಡಾರ ಕದ್ದ ಕಳ್ಳನು ನಾನು ನಿನ್ನ ಭಕುತಿಯೆಂಬ ಸಂಕೋಲೆಯನಿಕ್ಕಿ ನಿನ್ನ ದಾಸರ ಕೈಯಲ್ಲಿ ಒಪ್ಪಿಸಿಕೊಟ್ಟು ನಿನ್ನ ಮುದ್ರಿಕೆಯಿಂದ ಕಾಸಿ ಬಡೆಸು ದೇವ ನಿನ್ನ ವೈಕುಂಠದುರ್ಗದೊಳಗೆನ್ನ ಸೆರೆಯನಿಟ್ಟು ಸಲಹೊ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆನೆಯನು ಕಾಯಿದಾಗ ಜ್ಞಾನವಿದ್ದದ್ದೇನು

ಆನೆಯನು ಕಾಯಿದಾಗ ಜ್ಞಾನವಿದ್ದದ್ದೇನು ನಾನು ಒದರಲು ಈಗ ಕೇಳದಿದ್ದದ್ದೇನು ದಾನವಾಂತಕ ದೀನರಕ್ಷಕ ಮಾನವುಳಿಸಿಕೊಳ್ಳೊ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ನಿನ್ನ ಸ್ಮರಣೆಯ ಸ್ಮರಿಸಲು

ಹರಿ ನಿನ್ನ ಸ್ಮರಣೆಯ ಸ್ಮರಿಸಲು ದುರಿತ ಪೀಡಿಪುದುಂಟೆ ಅರಿತು ಭಜಿಪರಿಗೆಲ್ಲ ಕೈವಲ್ಯಜೋಕೆ ಕರುಣವರಿತು ತನ್ನ ಮಗನ ಕೂಗಿದವಗೆ ಮರಣಕಾಲದಿ ಒದಗಿದೆ ಶ್ರೀಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೀನಮಾನವಯೋನಿಯಲಿ ಜನಿಸಿದೆನೊ ನಾನು

ಹೀನಮಾನವಯೋನಿಯಲಿ ಜನಿಸಿದೆನೊ ನಾನು ಏನಾದರೇನು ದೀನದಯಾಸಾಗರನೆ ಯೋನಿ ಎನ್ನ ದೇಹ ಅನ್ನದಂತೆ ಮಾಡೊ ನ್ಯಾಸವನು ಬೋಧಿಸಿ ಸಾನುರಾಗದಿ ಕಾಯೊ ವೇಣುಧರ ವೇದಾಂತವೇದ್ಯ ನರಹರಿಯೆ ಕಾನನದೊಳು ಕಣ್ಗೆ ಕಾಣದವ ಬಿದ್ದಂತೆ ನಾ ಬಿದ್ದೆ ನೀ ಕಾಯೊ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು