Skip to main content

ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಅಮ್ಮ ಬಾರೊ ರಂಗಮ್ಮ ಬಾರೊ

ಅಮ್ಮ ಬಾರೊ ರಂಗಮ್ಮ ಬಾರೊ, ಪುಟ್ಟ-
ತಮ್ಮ ಬಾರೊ ಮುದ್ದಿನುಮ್ಮ ತಾರೊ ||ಪ||

ಅಯ್ಯ  ಬಾರೊ  ಅಜನಯ್ಯ  ಬಾರೊ,  ಚಿನು-
ಮಯ್ಯ ಬಾರೊ  ಬೆಣ್ಣೆಗಯ್ಯ ಬಾರೊ     ||೧||

ಕಂದ ಬಾರೊ ಪೂರ್ಣಾನಂದ  ಬಾರೊ,  ಸುರ-
ವಂದ್ಯ  ಬಾರೊ  ಬಾಲ್ಮುಕುಂದ ಬಾರೊ     ||೨||

ಅಣ್ಣ ಬಾರೊ ತಾವರೆಗಣ್ಣ ಬಾರೊ,  ಎನ್ನ
ಚಿನ್ನ ಬಾರೊ  ಶಿಶುರನ್ನ  ಬಾರೊ     ||೩||

ನಲಿದು  ಬಾರೊ  ಕರುಣಾಜಲಧಿ,  ಬಾರೊ  ಆಡಿ
ಬಳಲ್ದೆ  ಬಾರೊ  ಕರೆದರೊಲಿದು ಬಾರೊ ||೪||

ಶ್ರೀಶ  ಬಾರೊ  ಹಸುಗೂಸೆ  ಬಾರೊ,  ಪರಿ-
ತೋಷ  ಬಾರೊ  ಪ್ರಸನ್ವೆಂಕಟೇಶ ಬಾರೊ     ||೫||

------ಪ್ರಸನ್ನವೆಂಕಟದಾಸರು 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅನ್ನದಾನದ ಸುಖ ನಿನಗಲ್ಲದೆ

ಅನ್ನದಾನದ ಸುಖ ನಿನಗಲ್ಲದೆ ಬೇರೆ
ಅನ್ಯ ಜನರೊಳಗುಂಟೆ ಜನ್ಯ ಜನಕಾ    ||ಪ||

ಸಹಿತ ಒಂದು ಕೂಸು ಬರಲು
ಜಗತ್ ಕೋಶ ಅನ್ನವ ಮಾಡಿ ನೀ ಸಮರ್ಪಿಸಿದೆ    ||೧||

ಕೊಟ್ಟ ಅನ್ನಕೆ ಸಮ ಇಷ್ಟನ್ನವೇನುಂಬಿ
ಇಷ್ಟು ಜನರು ಬಲಿಕೊಟ್ಟು ಭುಂಜಿಪರು    ||೨||

ಇಂದಿರೇಶಗೆ ಕೊಟ್ಟ ದಾನದಿ ಶತಾನಂದನಾದಿಯೇ
ಮುಕ್ತಿ ಮಂದಿರದೊಳಗೆ ಹರಿ ತಂದು ತೋರೆನಗೆ ||೩||

--ಪಾಂಡುರಂಗೀ ಹುಚ್ಚಾಚಾರ್ಯರು
 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ


ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ
ಬಗೆ ತಿಳಿಯುವರಾರಮಮ ||ಪ||

ಮಗನ ಮಗನಿಗೆ ಒಲಿದು ಮಗಳ ಧಾರೆಯನೆರೆದಿ
ಮಗಳ ಮಗನ್ವೈರಿಯ ನಿಗಯಿಟ್ಟು ಸಲಹಿದಿ ||ಅ||

ಓಂಕಾರದಾಚೆಗಿರ್ದ ಅಮಲರೂಪ
ಓಂಕಾರದೊಳು ನೆಲೆಸಿದಿ
ಅಂಕುರಿಸಕ್ಷರತ್ರಯಲಂಕಾರದಿಂ ಸೃಷ್ಟಿ-
ಸಂಕಲ್ಪಗೈದು ನಿಷ್ಕಲಂಕನೆಂದೆನಿಸಿದಿ     ||೧||

ಸೃಷ್ಟಿ ಉತ್ಪತ್ತಿಗೈದಿ ಉದರದಿ
ಇಟ್ಟು ರಕ್ಷಕನೆಂದೆನಿಸಿದಿ
ಶಿಕ್ಷಕೆನಿಸಿ ಸರ್ವಸಾಕ್ಷಿ ನೀನೆಯಾಗಿ
ಮೋಕ್ಷ ನೀಡುವ ಮದಧ್ಯಕ್ಷನೆಂದೆನಿಸಿದಿ ||೨||

ಮೇದಿನಿಗೆ ಪತಿಯೆಂದೆನಿಸಿ ದಾಸರ ಪ್ರಿಯ
ಮೇದಿನಿಸುತೆ ಮದುವ್ಯಾದಿ
ವೇದಸಮ್ಮತಗೈದಿ ಸಾಧುಜನಕಹುದಾದಿ
ಅದಿ ಶ್ರೀರಾಮ ಮಮ ಬೌದ್ಧದೇವನಾದಿ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅಪ್ಪಾನ ನಾಮವನು ಒಪ್ಪೊತ್ತಾದರೂ ಭಜಿಸಿ

ಅಪ್ಪಾನ ನಾಮವನು

ಒಪ್ಪೊತ್ತಾದರೂ ಭಜಿಸಿ
ಒಪ್ಪೊತ್ತುಂಬೇನಯ್ಯ
ಮುದ್ದುಮೋಹನವಿಠಲ

--ಮೋಹನದಾಸರು 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages