ಸುಳಾದಿ

Compositions that fall in suLAdi category

ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ

   ಧ್ರುವ ತಾಳ
ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ
ಭಾವನೆಯನು ಕೇಳಿ ಭಕ್ತಜನರು
ಜೀವರಿಂದ ಈ ಧರ್ಮ ಎಂದಿಗೆ ಆದದಲ್ಲ
ದೇವನಲ್ಲೇವೆ ಇಂಥ ಗುಣಗಳುಂಟು
ಭಾವಾಷ್ಟ ಪುಷ್ಪ ಗುಣವ ದೇವನಲ್ಲಿಪ್ಪವೆಂದು
ಜೀವ ತಿಳಿದರೆ ಉದ್ಧಾರ ಉಂಟು
ಜೀವರೆಂಬುವರು ಕರ್ಮ ಬದ್ಧರು ಇನ್ನು
ದೇವನು ಕರ್ಮ ತ್ರಿಗುಣಾದಿ ರಹಿತ
ಜೀವರಿಂದಲಿ ಅತ್ಯಂತ ಭೇದ ಸಾಕಾರ ಹರಿ
ಯಾವತ್ತರಾದಿ ವ್ಯಾಪ್ತ ಎಣಿ ಇಲ್ಲದ ಮೂರ್ತಿ
ಪಾವನಾಂಗ ಪಾಪನಾಶ ನಿತ್ಯತೃಪ್ತಾ

ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನಾಧೀನ ಶರೀರ ಕರಣ ಚೀಷ್ಟೆಗಳೆಲ್ಲ

(ಸಾರಂಗರಾಗ , ಧ್ರುವತಾಳ) ನಿನ್ನಾಧೀನ ಶರೀರ ಕರಣ ಚೀಷ್ಟೆಗಳೆಲ್ಲ ನಿನ್ನಾಧೀನ ಬಂಧ ಮೋಕ್ಷ ನಿರಯಗಳು ನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲ ನಿನ್ನಾಧೀನ ಸುಕೃತ ದುಷ್ಕೃತ ಫಲವು ನಿನ್ನಾಧೀನ ವಿಷಯಾತ್ಮ ಬುದ್ಧಿಗಳೆಲ್ಲ ನಿನ್ನಾಧೀನ ಚರಾಚರವೆಂದು ಶ್ರುತಿ ಸಾರುತಲಿವೆ ಇಂತು ಪುಣ್ಯಪಾಪವೆಲ್ಲ ನಿನ್ನ ಲೇಪಿಸವೋ ದೇವ ಎಂತು ಜೀವರನು ಪುಣ್ಯಪಾಪಂಗಳನುಣಿಸುವೆ ಅಂತರಾತ್ಮನೆನ್ನ ಮಹಿಮೆಗೆ ನಮೋ ಎಂಬೆ ಎಂತೋ ಚಿತ್ತವಿನ್ನೆಂತೋ ಪಾಲಿಸೋ ರಂಗವಿಠಲ (ಮಠ್ಯ ತಾಳ) ಮುನ್ನ ನಿನ್ನ ಚರಣಕಮಲವ ನಂಬಿದೆ ಭವಭವಂಗಳಲಿ ಬಂದೆನೊ ಪನ್ನಗೇಶಶಯನ ಶ್ರೀ ಹರೇ ಇನ್ನು ಬಿಡೆನು. ಬಿಡೆನಯ್ಯ ಸಂಪನ್ನ ಎನ್ನ ಗುಣದೋಷವರಸದೆ ಇನ್ನು ಕಾಯೊ ರಂಗವಿಠಲ (ರೂಪಕತಾಳ) ಕರಣಗಳು ಬಿಡದೆ ತಮ್ಮ ತಮ್ಮ ವಿಷಯಂಗಳಿಗೆ ಎಳೆಯುತಲಿವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ವನದೆಡೆಗಳು ಈ ಲತೆವನಗಳು

(ಭೈರವಿ ರಾಗ ) ( ಧ್ರುವತಾಳ) ಈ ವನದೆಡೆಗಳು ಈ ಲತೆವನಗಳು ಈನದಿಪುಳಿನಗಳೀ ಶಶಿಶಿಲೆಗಳು ಸುರತರು ನೆಳಲು ಶುಕಪಿಕರವ ಯಾಕೆ ಮಾಧವನ ಮರೆಯಲೀಯದಿವೆ ಕೆಳದಿ ಆ ಮುಗುಳುನಗೆಯ ಆ ಸೊಬಗ ಈಸುರತರು ನೆಳಲೀ ರತಿಯ ಈ ಸುರತವನರಿದ ಬಾಲೆಯರೆಂತೊ ಈ ಸುಗುಣಮಯ ರಂಗವಿಠಲನೆ ಕೆಳದಿ ೧ (ಮಠ್ಠ್ಯ ತಾಳ) ಇನ್ನು ರಂಗನಂಗಸಂಗವು ಎತ್ತಣದು ಗೋಪಿಯರಿಗೆ ಮಧುರೆಯ ಮಾನಿನಿಯರ ಬಲೆಯಲ್ಲಿ ಸಿಲುಕಿದನ ಮಧುರೆಯ ಮಾನಿನಿಯರು ರತಿವಿದಗ್ಧರಾ ವಧುಗಳು ರಸಿಕ ನಮ್ಮ ರಂಗವಿಠಲ ೨ (ತ್ರಿಪುಟ ತಾಳ) ಇನ್ಯಾತಕೆ ರಂಗ ಇಲ್ಲಿಗೆ ಬಾಹಾ ಮಧುರಾಪುರಿಯರಸನಾದ ಮಲ್ಲರ ಕೊಂದು ಮಾವನ್ನ ಮಡುಹಿದ ಮಧುರಾಪುರಿಯರಸನಾದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ

( ನಾಟಿ ರಾಗ , ಧ್ರುವತಾಳ) ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ ಅನ್ನಂತ ಕಾಲದಲ್ಲಿ ನಿನ್ನವನೆನಿಸದೆ ಮೂರುಖನಾದೆನೊ ಅನ್ನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊ ಅನ್ನಂತ ಕಾಲದಲ್ಲಿ ಅದಾವ ಪುಣ್ಯದಿಂದ ಬಂದು ಇಂದು ನಿನ್ನವನೆನಿಸಿದೆ ಅದಾವ ಪುಣ್ಯದಿಂದಲೆನ್ನ ಮನ ನಿನ್ನಲ್ಲೆರಗಿತೊ ನೋಯದಂತೆ ಎನ್ನ ಪೊರೆದು ಪಾಲಿಸೊ ದೀನನಾಥ ಶ್ರೀರಂಗವಿಠಲ ೧ (ಮಠ್ಯತಾಳ) ಅನ್ನಕ ಭಯದ್ರವಿಣ ದೇಹನಿಮಿತ್ತ ಅನ್ನಕ ಶೋಕಾಶಯ ಮಾರಿ ಅನ್ನಕ ಲೋಭ ಅಶುಭದ ಲಾಭ ಅನ್ನಕ ನನ್ನದು ನಾನೆಂಬಹಮ್ಮಿಕೆ ಆವನ್ನಕ ನಿನ್ನ ಚರಣರತಿ ದೊರಕೊಳ್ಳದೊ ಉನ್ನಂತ ಗುಣಪರಿಪೂರ್ಣ ರಂಗವಿಠಲ ೨ (ತ್ರಿಪುಟತಾಳ)
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರುತ ನಿನ್ನಯ ಮಹಿಮೆ

ಶ್ರೀರಾಘವೇಂದ್ರರಿಂದ ವಿರಚಿತವಾದ ವಾಯುದೇವರ ಅವತಾರತ್ರಯ ಸುಳಾದಿ ಧ್ರುವತಾಳ ಮರುತನಿನ್ನಯ ಮಹಿಮೆ ಪರಿಪರಿಯಿಂದ ತಿಳಿದು | ಚರಿಸಿದ ಮನುಜನಿಗೆ ದುರಿತಬಾಧೆಗಳ್ಯಾಕೆ | ಸರಸಿಜಾಸನಸಮ ಶಿರಿದೇವಿ ಗುರುವೆಂದು | ಪರತತ್ತ್ವಹರಿಯೆನುತ ನಿರುತ ವಂದಿಸಿ ಅಖಿಲ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರಸಿಂಹ ಸುಳಾದಿ

ನರಸಿಂಹ ಸುಳಾದಿ ರಚನೆ - ವಿಜಯದಾಸರು ರಾಗ : ನಾಟಿ, ತಾಳ : ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಭೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಆ- ಘೋರ ದುರಿತ ಸಂಹಾರ ಮಾಯಾಕಾರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನ್ವಂತರಿ ಸುಳಾದಿ

ಧನ್ವಂತರಿ ಸುಳಾದಿ ರಚನೆ - ವಿಜಯದಾಸರು ಧ್ರುವ ತಾಳ ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು ಕಾರ್ಯನಿರ್ಮಲಿನ ಕಾರಣವಾಗುವುದು. ಮಾಯಾ ಹಿಂದಾಗುವುದು ನಾನಾ ರೋಗದ ಬೀಜ ಬೇಯಿಸಿ ಕಳೆವುದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ದುರ್ಗಾ ಸುಳಾದಿ

ಶ್ರೀ ದುರ್ಗಾ ಸುಳಾದಿ ಧ್ರುವ ತಾಳ ದುರ್ಗಾ ದುರ್ಗಿಯೆ ಮಹಾ ದುಷ್ಟಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರೂ ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ನೀಲಗುದುರೆಯನ್ನೇರಿ...

ಧ್ರುವತಾಳ ನೀಲಗುದುರೆಯನ್ನೇರಿ ಶಾಲು ಸೊಂಟಕ್ಕೆ ಸುತ್ತಿ ಕಾಲುಕುಪ್ಪಸ ತೊಟ್ಟು ಮೇಲೆ ಮೋಹನ್ನ ಹಾಕಿ ಓಲ್ಯಾಡಿಸುತ್ತ ಒಂಟಿ ಢಾಳಾಗಿ ಶೋಭಿಸಲು ಸಾಲು ಬೆರಳುಂಗುರ ಕೈಲಿ ಖಡ್ಗವ ಪಿಡಿದು ತೋಳು ತಾಯಿತ ಶಿರಕೆ ಮೇಲಾದ ವಸ್ತ್ರ ಸುತ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೀಜ ಮೂರನು ಬಿತ್ತಿ ಸಾಜ ಬೀಜವ ತೋರಿರಿ

ರಾಗ: ಸೌರಾಷ್ಟ್ರ ತಾಳ: ಮಟ್ಟೆ ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು || ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು ರಂಜಕದ ಬೇರಿಗೆ ರಾಗ ಮುವತ್ತೆರಡು ಕುಂಜರದಗಮನೆ ಕೋವಿದನರಸಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು