ಉಗಾಭೋಗ

Haridasa compositions that fall under ugAbgOga category

ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು

ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು ಪಾಲಿಸಯ್ಯ ಭಾಗ್ಯವಿತ್ತು ಭಕ್ತವತ್ಸಲ ನಿತ್ಯಪೂರ್ಣ ಮಂಗಲವಿತ್ತು ನಿತ್ಯದಿ ಕಲ್ಯಾಣವಿತ್ತು ನಿತ್ಯ ಸಲಹೊ ವ್ಯಾಸಮುನಿವಂದ್ಯ ಗೋಪಿನಾಥನೆ ತುರುಬಿನ ಮ್ಯಾಲೆ ತುರುಬಿದ ಮೊಲ್ಲೆ ಮಲ್ಲಿಗೆ ಕುಸುಮಗಳ ರಂಗಾ ಕೊರಳಲ್ಲಿ ಕಂಠೀಸರ ವನಮಾಲೆ ವರಕಲ್ಪ ತರುವನೆನ್ನೀ ರಂಗಾ ಕರದಲ್ಲಿ ವೇಣು ಬೆರಳಲ್ಲಿ ಮೀಟುತ ಮರಿದುಂಬಿ ಝೇಂಕಾರ ರಂಗಾ ಸರಿಗಮಪದನಿಸ ಸನಿದಪಮಗರಿಸ ಅಧರದಲೂದುತಿರೆ ರಂಗಾ ಸಿರಿಯರಸನು ಸಿರಿಪತಿ ರಂಗವಿಠಲ ಸರಸದಿ ವೇಣುನಾದ ಮಾಡಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಮನ ವಿಷಯಂಗಳಲಿ ಮುಣುಗಿತೊ

ಎನ್ನ ಮನ ವಿಷಯಂಗಳಲಿ ಮುಣುಗಿತೊ ಎನ್ನ ತನುವು ವೃದ್ಧಾಪ್ಯ ಐದಿತೊ ಅಂತಕರ ಕರೆ ಬಾಹೊ ಹೊತ್ತಾಯಿತೊ ಕಾಲ ವಿಳಂಬವಿನಿತಿಲ್ಲವಯ್ಯ ವ್ಯಾಳೆ ಅರಿತು ಬಿನ್ನಹ ಮಾಡಿದೆ ಹೀಗೆ ತರಳರ ಬಿಡುವ ತಾಯಿಗಳುಂಟೆ , ನೀ ಕರುಣಾನಿಧಿಯೆಂಬ ಬಿರುದು ಸಲ್ಲಿಸು ದೇವ ಕರುಣಾಕರ ಸಿರಿರಂಗವಿಠಲರೇಯ , ನೀ ಕರುಣಾನಿಧಿಯೆಂಬ ಬಿರುದು ಸಲ್ಲಿಸು ದೇವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನಂತಕಾಲದಲ್ಲಿ ಯಾವ ಪುಣ್ಯದಲ್ಲಿ

ಅನಂತಕಾಲದಲ್ಲಿ ಯಾವ ಪುಣ್ಯದಲ್ಲಿ ಎನ್ನ ಮನ ನಿನ್ನಲ್ಲಿ ಎರಗಿಸೊ ಎನ್ನ ಮನವನು ನಿನ್ನ ಚರಣದೊಳೊಮ್ಮೆ ಇಟ್ಟು ಸಲಹೊ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ

ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ ಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲ ಶರಣು ಬಂದವನ ರವಿಯತನಯನ ನೋಡು ಮರೆಯದೆ ಭಜಿಸು ರಂಗವಿಠಲರೇಯನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಲಿಗ್ರಾಮ ವೃಂದಾವನದಲಿ ಇಪ್ಪಂತೆ

ಸಾಲಿಗ್ರಾಮ ವೃಂದಾವನದಲಿ ಇಪ್ಪಂತೆ ಎನ್ನ ಮನವನು ಬಿಡದಿಹ ಹರಿ ಜನ್ನರ ಜನ್ನ ನರಹರಿ ಗೋವಿಂದ ಎನ್ನ ಮನವನು ಬಿಡದಿಹ ಪುಂಡರೀಕ ಮನ ಪಿರಿಯಾನೆಯಯ್ಯ ಪಂಡರಂಗಿಪುರೀಪತಿ ಸಿರಿರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಂದೆ ಕೆಟ್ಟು ಬಂದವರ

ಮುಂದೆ ಕೆಟ್ಟು ಬಂದವರ ಹಿಂದಕೆ ಹಾಕಿಕೊಂಡ ಬಳಿಕ ಬಂದ ಗುಣದೋಷಗಳ ಎಣಿಸುವರೆ ಎಲೆ ದೇವಾ ! ಅಂದವಲ್ಲ ನಿನ್ನ ಘನತೆಗೆ ತಂದೆತಾಯಿಗಳು ತಮ್ಮ ಕಂದನವಗುಣಗಳೆಣಿಸುವರೆ ? ಎಂದೆಂದಿಗೆನ್ನ ಉದ್ಧರಿಸಬೇಕೆಲೆ ದೇವ ಸಂದೇಹವ್ಯಾತಕೆ ನಮೋ ರಂಗವಿಠಲಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭವವೆಂಬ ಅಡವಿಯಲ್ಲಿ ತಾಪತ್ರಯದಲ್ಲಿ ಸಿಲುಕಿ

ಭವವೆಂಬ ಅಡವಿಯಲ್ಲಿ ತಾಪತ್ರಯದಲ್ಲಿ ಸಿಲುಕಿ ಭಯಗೊಳ್ಳದಂತೆ ಗೆಲ್ಲುವುದಕೆ ಶ್ರೀಹರಿನಾಮ ಹೊರತಾಗಿ ಮತ್ತುಂಟೆ ಎನ್ನ ಮನವ ನಿನ್ನ ಚರಣದಲ್ಲಿಟ್ಟು ಸಲಹೊ ನಮೋ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ

(ಪುನ್ನಾಗವರಾಳಿ ರಾಗ) ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ(?) ಅಂಬುಜೋದರನ ನೆಲೆ ಅರಿಯದ ದುರಾತುಮರು ಬೆಂಬಿಡದೆ ಸುಖವನರಸುವರುಂಟೆ? ಉದ- ರಂಭರದಿ ಡಂಭಕರು ಇಹಪರಕೆ ಬಾಹ್ಯರೆಂದೂ ಶಂಬರಾಂತಕ ಪಿತ ರಂಗವಿಠಲರೇಯನ್ನ ಪಾ- ದಾಂಬುಜೋದ್ಭ್ರಮರದೊಳು(?) ಮಿಗೆ ದೂರರಾದವರು ಬೆಂಬಿಡದೆ ಸುಖವನರಸುವರುಂಟೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಲ್ಲವನು ಉಳ್ಳವನು ನೀನಿರಲು ಭಜಿಸದೆ

ಬಲ್ಲವನು ಉಳ್ಳವನು ನೀನಿರಲು ಭಜಿಸದೆ ಕ್ಷುಲ್ಲಕರ ಮತವಿಡಿದು ಸುಖವ ಬಯಸುವೆ ನಾನು ಕಲ್ಲು ಗೋವಿನ ಹಾಲು ಕರು ಬಯಸಿದಂತೆ ನಾ ಹಲ್ಲು ಹೋಹುದನರಿಯೆ ಅಕಟಕತ ಮಂದಮತಿಯು ಕಳ್ಳ ಗೋವನು ಹುಲ್ಲು ಗಂಜಿಯನೆರೆದು ಸಲಹಿದಡೆ ಏನು ಫಲ ಬಲ್ಲಿದಾಸೆಯ ಬಿಡಿಸೋ ನಮೋ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು