ಹೂ ಬೇಕೆ ಪರಿಮಳದಾ?

ಹೂ ಬೇಕೆ ಪರಿಮಳದಾ?

ಪಲ್ಲವಿ: ಹೂ ಬೇಕೆ ಪರಿಮಳದಾ? ಪರಮ ಪುರುಷ ನಮ್ಮ ಕೃಷ್ಣನ ತೋಟದ! ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ ಮಲ್ಲೆ ಗುಲಾಬಿ ತಾವರೆ ಪಾರಿಜಾತ ಎಲ್ಲ ವಿಧದ ಮನಕ್ಲೇಶವ ಕಳೆಯುವ ಪುಲ್ಲನಾಭ ನಮ್ಮ ಕೃಷ್ಣನ ತೋಟದ! || ಹೂ ಬೇಕೆ ?|| ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ ಕೇರಿಕೇರಿಯಲಿ ಮಾರುವುದಲ್ಲ ಭೂರಿ ಭಕುತಿಯೆಂಬ ಭಾರಿಯ ಬೆಲೆಯಿದ ಮಾರಿದ್ದು ಪೇಳಿದ್ದ ಶೌರಿಯ ಸೊಬಗಿನ || ಹೂ ಬೇಕೆ ?|| ರಂಗುರಂಗುಗಳಿಂದ ಕಂಗೊಳಿಸುವ ಧ್ವಜ ಬಂಗಾರದ ಕವಿ ಸಂಗ್ರಹಿಸುವ ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ ಅಂಘ್ರಿಯೊಳ್ ಸಂಗದೆ ಮಂಗಳಕರವಾದ || ಹೂ ಬೇಕೆ ?||
ದಾಸ ಸಾಹಿತ್ಯ ಪ್ರಕಾರ
ಬರೆದವರು