ಹರಿ ಭಕುತಿ ಉಳ್ಳವರ

ಹರಿ ಭಕುತಿ ಉಳ್ಳವರ

(ರಾಗ ಯದುಕುಲಕಾಂಭೋಜಿ. ಝಂಪೆ ತಾಳ ) ಹರಿ ಭಕುತಿ ಉಳ್ಳವರ ಶರೀರವೆ ಕುರುಕ್ಷೇತ್ರ ||ಪ|| ಅವರು ನರರೆಂದು ಬಗೆವವರೆ ನರಕವಾಸಿಗಳು ||ಅ.ಪ|| ಸದಮಲನ ನೆನೆಸುವ ಹೃದಯ ಕಾಶೀಪುರವು ಮಧುವೈರಿ ನೆನೆವೆ ಮನ ಮಣಿಕರ್ಣಿಕೆ ಪದುಮನಾಭನ ಪಾಡ್ವ ವದನವೇ ವೈಕುಂಠ ಸದಮಲನ ಬಣ್ಣಿಸುವ ಜಿಹ್ವೆ ಶ್ರೀಮುಷ್ಟ ನರಹರಿಯ ನಿರೀಕ್ಷಿಸುವ ನಯನ ದ್ವಾರಾವತಿಯು ಸಿರಿಧರಗೆ ಶರಣೆಂಬ ಶಿರವೆ ಬದರಿ ಮುರಹರನ ಕಥೆಯ ಕೇಳುವೆ ಕಿವಿಯ ಕೇದಾರ ಹರಿಯ ನಿರ್ಮಾಲ್ಯ ಘ್ರಾಣಿಯ ಮೂಗು ಮಧುರೆ ಲಕ್ಷ ಪ್ರದಕ್ಷಿಣೆ ಮಾಳ್ಪ ಚರಣ ಮಾಯಾವತಿಯು ಲಕ್ಷ್ಮೀಪತಿಯ ಪೂಜಿಸುವ ಕರವೆ ಕಂಚಿ ಶಿಕ್ಷಿಸುವುದು ಸುಕೃತ ದುಷ್ಕೃತ ಆಲಿಸಿ ಕೇಳೊ ಪಕ್ಷಿವಾಹನ ಪುರಂದರವಿಠಲನು ಕೊಡುವ ಮುಕುತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು