ಹರಿ ದರುಶನಕಾಗಿ ನಾರದರು ಬರಲು

ಹರಿ ದರುಶನಕಾಗಿ ನಾರದರು ಬರಲು

( ರಾಗ ಸಾವೇರಿ. ತ್ರಿಪುಟ ತಾಳ) ಹರಿ ದರುಶನಕಾಗಿ ನಾರದರು ಬರಲು ಸಿರಿದೇವಿ ಹೊರಗಿನ ಬಾಗಿಲಲ್ಲಿದ್ದಳು ||ಪ|| ಕರಕಮಲ ಮುಗಿದು ದೊರೆ ಸಮಯವೇನೆನಲು ನಾರೀಮಣಿ ಲಕುಮಿ ಅರುಹುವಳಾಗ ||ಅ|| ವರ ದೇವತಾರ್ಚನೆ ಅರಮನೆಯೊಳಗೆ ಭರದಿಂದ ಕುಳಿತಿಪ್ಪ ಪರಮಾತ್ಮನು ಸರಸಿಜೋದ್ಭವನಾಗಿ ಸುರರಿಗೆ ದೊರೆಯೀತ ಪರಮ ಆಶ್ಚರ್ಯವ ಅರಿಯಬೇಕೆಂದು || ಕಳವಳಿಸುತ ಮನದೊಳಗೆ ತೋರುತಲಿರೆ ಥಳಥಳಿಸುವ ರತ್ನಸಂಪುಟದಿ ಕಲುಷದೂರನನ್ನು ಪ್ರಹ್ಲಾದ ವರಧ್ರುವನು ಬಲಿ ಅಂಬರೀಷ ಮುಖ್ಯರು ಪೂಜೆಗೆಯ್ವ || ಹರಿದಾಸರ ಚರಣರಜಗಳ ತುಂಬಿಟ್ಟು ತೆಗೆದು ತೋರಿದ ಮುನಿಗೆ ಪರಮಾತ್ಮನು ಪರಮಾನಂದಭರಿತನಾದ ವಿರಿಂಚಿಸುತ ಸಿರಿಪತಿ ಪುರಂದರವಿಠಲನ್ನ ಸ್ತುತಿಸುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು