ಹರಿ ಕುಣಿದ ನಮ್ಮ

ಹರಿ ಕುಣಿದ ನಮ್ಮ

( ರಾಗ ಬೆಹಾಗ್. ಆದಿ ತಾಳ) ಹರಿ ಕುಣಿದ, ನಮ್ಮ ಹರಿ ಕುಣಿದ ||ಪ|| ಅಕಳಂಕಚರಿತ ಮಕರಕುಂಡಲಧರ ಸಕಲರ ಪಾಲಿಪ ಹರಿ ಕುಣಿದ || ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ || ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ ಚೆಂದದಿ ನಲಿವುತ್ತ ಹರಿ ಕುಣಿದ || ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ದಾಮ ದಿಟ್ಟ ಮಲ್ಲರ ಗಂಡ ಹರಿ ಕುಣಿದ || ಪರಮಭಾಗವತರ ಕೇರಿಯೊಳಾಡುವ ಪುರಂದರವಿಠಲ ಹರಿ ಕುಣಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು