ಸದ್ದು ಮಾಡಲು ಬೇಡವೊ

ಸದ್ದು ಮಾಡಲು ಬೇಡವೊ

( ರಾಗ ಕಲ್ಯಾಣಿ. ಅಟ ತಾಳ) ಸದ್ದು ಮಾಡಲು ಬೇಡವೊ, ನಿನ್ನ ಕಾಲಿಗೆ ಬಿದ್ದು ನಾ ಬೇಡಿಕೊಂಬೆ ||ಪ|| ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ- ದಿದ್ದದ್ದು ಕಂಡರೇನೆಂಬುವರೊ ರಂಗ || ಬಳೆ ಘಲ್ಲುಕೆನ್ನದೇನೊ, ಕಯ್ಯ ಪಿಡಿದು ಎಳೆಯದಿರೋ ಸುಮ್ಮನೆ ಮೊಲೆಗಳ ಮೇಲಿನ ಸೆರಗನೆಳೆಯಲು ಕೊ- ರಳ ಪದಕಗಳು ಧ್ವನಿಗೆಯ್ಯುವುವು ರಂಗ || ನೆರಿಗೆ ಕೈ ಕೊಡದಿರೊ, ಕಾಂಚಿಯದಾಮ ಉಡಿಗಂಟು ಧ್ವನಿಗೆಯ್ಯದೇ ಕರದುಟಿಯನು ಸವಿದು ಚಪ್ಪರಿಸಲು ತರವಲ್ಲ ಗಂಡ ಮತ್ಸರವ ತಾಳುವನಲ್ಲ || ನಾಡಮಾತುಗಳೇತಕೊ, ಸಂಗೀತವು ಪಾಡುವ ಸಮಯವೇನೋ ಗಾಡಿಗಾರ ಶ್ರೀ ಪುರಂದರವಿಠಲನೆ ಪಾಡಿ ಪಂಥಾಗಳೊಡಗೂಡುವ ಸಮಯಕ್ಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು