ಸಣ್ಣವನೆಂದು ನಾ ನಂಬಿ

ಸಣ್ಣವನೆಂದು ನಾ ನಂಬಿ

( ರಾಗ ಕಲ್ಯಾಣಿ. ಏಕ ತಾಳ) ಸಣ್ಣವನೆಂದು ನಾ ನಂಬಿ ಬಣ್ಣವೆಲ್ಲ ಸುರೆಗೊಂದು ಚಿಣ್ಣ ಬಾಲಕನು ಎಂದು ತಿಣ್ಣ ಮೊಲೆಗಳೆ ಕೊಟ್ಟೆ ||ಪ|| ಗೊಂಬೆಯ ಮದುವೆಯೆಂದು ನಂಬಿಸಿ ತಾ ಕರೆತಂದು ಶಂಬರಾರಿಸತಿಯ ಮನೆ ಎಂಬಲ್ಲಿ ಕೈದುಡುಕಿದ || ಚೆನ್ನೆಯನಾಡುವ ಎಂದು ಚೆನ್ನಿಗ ತಾನಾಗಿ ಬಂದು ಸನ್ನೆಯಿಂದ ಕೈ ಪಿಡಿದು ಕೆನ್ನೆಯ ಮುದ್ದಿಸಿ ನಡೆದ || ಉಟ್ಟ ಸೀರೆಗಳನೆಲ್ಲ ಕಟ್ಟಿ ಇಟ್ಟು ಜಲದೊಳು ನೆಟ್ಟನೆ ಇಳಿಯಲು ನಾವು ತಟ್ಟನೆ ತೆಗೆದೋಡಿದ || ಕಂಡ ಕಂಡಲ್ಲಿ ಎನ್ನ ಗಂಡನಂದದಲಿ ನೋಡಿ ಭಂಡಗೇಡು ಮಾಡಿದನು ಪುಂಡ ನಿನ್ನ ಮಗನಮ್ಮ || ಸ್ಮರನಯ್ಯನು ತಾ ಬಂದು ಸೆರಗ ಪಿಡಿದು ನಿಂದು ನೆರೆದು ಕಳುಹಿದನಮ್ಮ ಪುರಂದರವಿಠಲನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು