ಸಜ್ಜನರ ಸಂಗ ನಮಗೆಂದಿಗಾಗುವುದೊ

ಸಜ್ಜನರ ಸಂಗ ನಮಗೆಂದಿಗಾಗುವುದೊ

ಸಜ್ಜನರ ಸಂಗ ನಮಗೆಂದಿಗಾಗುವುದೊ ದುರ್ಜನರ ಸಂಗದಲಿ ನೊಂದೆ ಶ್ರೀ ಹರಿಯೇ ||ಪ|| ವಾಕು-ವಾಕಿಗೆ ಡೊಂಕನೆಣಿಸುವರು , ಮತ್ತೆ ಪೋಕರಾಡಿದ ಮಾತು ನಿಜವೆಂಬರು ವಾಕು-ಶೂಲಗಳಿಂದ ನೆಡುವರು, ಪರರನೀ ಪೋಕು ಮಾನವರಿಂದ ನೊಂದೆ ಹರಿಯೇ || ತಾವೇ ತಮ್ಮನು ಕೊಂಡಾಡಿಕೊಳ್ಳುವರು ನ್ಯಾಯವಿಲ್ಲದೆ ನುಡಿಯುವರು ಪರರ ಭಾವಿಸಲರಿಯರು ಗುರುಹಿರಿಯರ-ನಿಂಥ ಹೇಯ ಮನುಜರಿಂದ ನೊಂದೆ ಹರಿಯೇ || ಬಡಜನರನು ಕೊಂದು ಅಡಗಿಸಿಕೊಂಬರು ಬಿಡಲೊಲ್ಲರು ಹಿಡಿದನ್ಯಾಯವ ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ ಕಡುಮೂರ್ಖರಿಂದ ನಾ ನೊಂದೆನು ಹರಿಯೆ || ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು ತೆತ್ತಿಗರೊಡನೆ ಪಂಥವ ನುಡಿವರು ಸತ್ತ ಬಳಿಕ ಸೃಷ್ಟಿ ಸಟೆಯೆಂಬರು , ಇಂಥ ಮತ್ತ ಮನುಜರಿಂದ ನೊಂದೆ ಹರಿಯೇ || ಇಷ್ಟು ದಿನವು ನಿನ್ನ ನೆನೆಯದ ಕಾರಣ ಕಷ್ಟಬಡುವ ಕೈ ಮೇಲಾಗಿ ಸೃಷ್ಟಿಗೊಡೆಯ ಶ್ರೀಪುರಂದರವಿಠಲನ ಮುಟ್ಟಿ ಭಜಿಸಬೇಕು ಭ್ರಷ್ಟ ಮನವೇ ಇನ್ನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು