ಸಕಲ ದುರಿತಗಳ ಪರಿಹಾರ

ಸಕಲ ದುರಿತಗಳ ಪರಿಹಾರ

( ರಾಗ ಸೌರಾಷ್ಟ್ರ ಅಟ ತಾಳ) ಸಕಲ ದುರಿತಗಳ ಪರಿಹಾರ ಮಾಡಿದ್ಯೊ ವೆಂಕಟೇಶ ||ಪ || ಭಕುತಿಗೊಲಿದು ಬಂದು ಭಕ್ತರ ಕಾಯ್ದೆಯೊ ವೆಂಕಟೇಶ ||ಅ|| ಮತ್ಸ್ಯಾವತಾರದಿ ನಾಲ್ಕು ವೇದವ ತಂದ್ಯೊ ವೆಂಕಟೇಶ ಪೃಥ್ವೀಧರವ ಪೊತ್ತು ಭ್ರುತ್ಯರ ನೀ ಕಾಯ್ದ್ಯೊ ವೆಂಕಟೇಶ || ಧರೆಯನೊಯ್ದನ ಕೋರೆದಾಡೆಯಿಂದಲಿ ಕೊಂದ್ಯೋ ವೆಂಕಟೇಶ ತರಳಗೊಲಿದು ನೀ ಕಂಭದಿಂದಲಿ ಬಂದ್ಯೊ ವೆಂಕಟೇಶ || ಭೂಮಿ ದಾನವ ನೀಡಿದವನ ಬಾಗಿಲ ಕಾಯ್ದ್ಯೊ ವೆಂಕಟೇಶ ಭೂಮಿಪಾಲರನಳಿದು ಭಾರ್ಗವನೆನಿಸಿದ್ಯೊ ವೆಂಕಟೇಶ || ದಶಶಿರನನು ಕುಟ್ಟಿ ಶಶಿಮುಖಿಯಳ ತಂದ್ಯೊ ವೆಂಕಟೇಶ ಅಸುರೆಯ ಸಂಹರಿಸಿ ಕಂಸನ ಮಡುಹಿದ್ಯೊ ವೆಂಕಟೇಶ || ಅಧಮ ಜನರಿಗೆ ಬೋಧಿಸಿ ಬತ್ತಲೆ ನಿಂತ್ಯೊ ವೇಂಕಟೇಶ ಕುದುರೆಯೇರಿ ಕಲ್ಕಿ ರೂಪವ ತಾಳಿದ್ಯೊ ವೆಂಕಟೇಶ || ಹರಿದಾಸರ ಮೇಲೆ ಒಲಿದು ಬೇಗದಿ ಬಂದ್ಯೊ ವೆಂಕಟೇಶ ವರದ ಪುರಂದರವಿಠಲ ನಮೋ ವೆಂಕಟೇಶ ||
ದಾಸ ಸಾಹಿತ್ಯ ಪ್ರಕಾರ
ಬರೆದವರು