ವಿಧಾತೃ ದೇವತೆಗಳೆಲ್ಲ

ವಿಧಾತೃ ದೇವತೆಗಳೆಲ್ಲ

( ರಾಗ ಕಾಂಭೋಜ ಝಂಪೆ ತಾಳ) ವಿಧಾತೃ ದೇವತೆಗಳೆಲ್ಲ ವಿಷ್ಣುವಿನ ಹಿಂದೆ ಇದಕೆ ನಾ ಫಣಿ ಫಣ ಕೈಯಾಗೆ ಪಿಡಿವೆ ||ಪ|| ಸಕಲ ತೀರ್ಥಗಳೆಲ್ಲ ಸಾಲಿಗ್ರಾಮದ ಹಿಂದೆ ಸಕಲ ವೃಕ್ಷಗಳೆಲ್ಲ ಶ್ರೀತುಲಸಿ ಹಿಂದೆ ಪ್ರಕಟ ಗ್ರಂಥಗಳು ಭಾಗವತದ್ಹಿಂದೆ ಲೋಕದೊಳಿಹ ಜಲವೆಲ್ಲ ಭಾಗೀರಥಿಯ ಹಿಂದೆ (/ಪ್ರಕಟ ಚೈತನ್ಯಗಳು ಲೋಹದ ಹಿಂದೆ )|| ಮತಗಳೆಲ್ಲವು ಮಧ್ವಮತ ಸುಸಾರದ ಹಿಂದೆ ಇತರ ವರ್ಣಗಳೆಲ್ಲ ವಿಪ್ರರಾ ಹಿಂದೆ ವ್ರತಗಳೆಲ್ಲವು ಏಕಾದಶಿಯ(/ಹರಿದಿನ) ವ್ರತದ ಹಿಂದೆ ಅತಿಶಯದ ದಾನಗಳು ಅನ್ನದಾನದ್ಹಿಂದೆ || ಉತ್ತಮ ಗುಣಗಳೆಲ್ಲ ಉದಾರಗುಣದ ಹಿಂದೆ ಮತ್ತೆ ಕರ್ಮಗಳೆಲ್ಲ ಮಜ್ಜನದ ಹಿಂದೆ ಇತ್ತ ದ್ರವ್ಯಗಳೆಲ್ಲ ವಿದ್ಯಾದ್ರವ್ಯದ ಹಿಂದೆ ಚಿತ್ತಜನಯ್ಯ ಶ್ರೀಪುರಂದರವಿಠಲ (/ ಕ್ಷಿತಿಯೊಳು ನಮ್ಮ ಪುರಂದರವಿಠಲನ ಭಕ್ತ ವತ್ಸಲನೆಂಬ ಮೆರೆವ ಬಿರುದಿನ ಹಿಂದೆ || )
ದಾಸ ಸಾಹಿತ್ಯ ಪ್ರಕಾರ
ಬರೆದವರು