ವಾಸುದೇವನ ಚರಣವನಜ.

ವಾಸುದೇವನ ಚರಣವನಜ.

(ರಾಗ ನಾಟ. ಅಟ ತಾಳ) ವಾಸುದೇವನ ಚರಣವನಜ ವಂದಿಪನೆ , ಸಂ- ನ್ಯಾಸ ರತ್ನಾಕರನೆ ವ್ಯಾಸಮುನಿರಾಯ ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ- ವಾದಿ ಫಣಿ ಗರುಡ ತತ್ವಾದಿರಚಿತ ವಾದಿ ಭಯಂಕರ ದುರ್ವಾದಿ ಕೋಲಾಹಲ ವಾದಿ ಮಸ್ತಕ ಶೂಲ ಮಧುರ ಗುಣಶೀಲ ವೈಷ್ಣವೋತ್ತಮನೆ ಸದ್ವೈಷ್ಣವ ವ್ರಜಾನಂದ ವೈಷ್ಣವಾಗಮ ಭರಿತ ವೈಷ್ಣವ ಸುಪ್ರೀತ ವೈಷ್ಣವ ಕಮಲ ಸೂರ್ಯ ವೈಷ್ಣವ ಕುಮುದ ಚಂದ್ರ ವೈಷ್ಣವ ಕುಲೋತ್ಕೃಷ್ಟ ವೈಷ್ಣವ ಶಿಷ್ಟ ಹರಿಯಿಲ್ಲದ ಕ್ಷೇತ್ರವರಿಯದ ಮಹಾಮಹಿಮ ಹರಿಕೃಷ್ಣಚರಣಸರಸೀರುಹಭೃಂಗ ಗುರು ಪುರಂದರ ವಿಠಲನೆ ಪರದೈವವೆಂ- ದರುಹಿ ಸುಜನರ ಪೊರೆವ ವ್ಯಾಸಮುನಿರಾಯ
ದಾಸ ಸಾಹಿತ್ಯ ಪ್ರಕಾರ
ಬರೆದವರು