ರಾಮ ನಾಮ ಪಾಯಸಕ್ಕೆ

ರಾಮ ನಾಮ ಪಾಯಸಕ್ಕೆ

( ರಾಗ ಆನಂದಭೈರವಿ ರೂಪಕ ತಾಳ) (ರಾಗ ಪಂತುವರಾಳಿ ಏಕತಾಳ) ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಟ್ಠಲನಾಮ ತುಪ್ಪವ ಕಲಸಿ ಬಾಯಿ ಚಪ್ಪರಿಸಿರೊ ||ಪ|| ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಿಲಿ ಬೀಸಿ ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು || ಹೃದಯವೆಂಬೊ ಮಡಕೆಯಲ್ಲಿ ಭಾವವೆಂಬೊ ಎಸರನಿಟ್ಟು ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು || ಆನಂದ ಆನಂದವೆಂಬೊ ತೇಗು ಬಂದಾಗ ಎರಡು ತೇಗು ಬಂದಾಗ (/ತೇಗು ಬಂದಿತು ಕಾಣಿರೊ) ಆನಂದಮೂರುತಿ ನಮ್ಮ ಪುರಂದರವಿಠಲನ ನೆನೆಯಿರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು