ಯಾರು ಒಲಿದರೇನು

ಯಾರು ಒಲಿದರೇನು

(ರಾಗ ಆನಂದಭೈರವಿ ಆದಿತಾಳ) ಯಾರು ಒಲಿದರೇನು , ನಮಗಿ- -ನ್ನಾರು ಮುನಿದರೇನು ||ಪ|| ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ ||ಅ.ಪ|| ಊರನಾಳುವ ದೊರೆಗಳು ನಮ್ಮ ದೂರ ಅಟ್ಟಿದರೇನು ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು ಮಾರಿ ಹಿಂಡು ಮತ್ತೆ ಮುಸುಕಿದ ದಂಡು ಮೈಗೆ ಮುತ್ತಿದರೇನು ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ || ಪಡೆದ ತಾಯಿ ನಮ್ಮೊಳು ಅಹಿತ ಮಾಡಿದರೇನು ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು ಒಡನಾಡುವ ಗೆಳೆಯರು ನಮ್ಮೊಳಗೆ ವೈರವ ಬೆಳೆಸಿದರೇನು ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ || ಕಾನನದೊಳ್ಹರಿಯುವ ಸರ್ಪವು ಕಾಲಿಗೆ ಸುತ್ತಿದರೇನು ಜೇನಿನಂದದಿ ಕ್ರಿಮಿ ಕೀಟಗಳು ಚರ್ಮಕೆ ಮುತ್ತಿದರೇನು ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು