ಮದ್ದು ಮಾಡಲರಿಯೆ

ಮದ್ದು ಮಾಡಲರಿಯೆ

(ರಾಗ ಮಧ್ಯಮಾವತಿ ತ್ರಿಪುಟ ತಾಳ ) ಮದ್ದು ಮಾಡಲರಿಯೆ ಮುದ್ದು ರಮಾದೇವಿ ||ಪ || ಮುದ್ದು ಬಾಲಕೃಷ್ಣನಲಿ ಮನ ಸಿದ್ಧವಾಗಿ ನಿಲ್ಲುವಂತೆ || ವಚನಗಳೆಲ್ಲ ವಾಸುದೇವನ ಕಥೆಯೆಂದು ರಚನೆ ಮಾಡುವಲ್ಲಿ ರಕ್ತಿ ನಿಲ್ಲೋ ಹಾಗೆ || ಸಂತೆ ನೆರಹಿದ ಸತಿಸುತರು ತನ್ನವರೆಂಬ ಭ್ರಾಂತಿ ಬಿಟ್ಟು ನಿಶ್ಚಿಂತನಾಗೋ ಹಾಗೆ || ಎನ್ನೊಡೆಯ ಸಿರಿ ಪುರಂದರವಿಠಲನ್ನ ಸನ್ಮತಿಯಿಂದ ನಾ ಹಾಡಿ ಪಾಡೋ ಹಾಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು