ಮಂಗಳ ಶ್ರೀ ತುಳಸಿದೇವಿಗೆ

ಮಂಗಳ ಶ್ರೀ ತುಳಸಿದೇವಿಗೆ

ಪಲ್ಲವಿ: ಮಂಗಳ ಶ್ರೀ ತುಳಸಿದೇವಿಗೆ ಜಯ ಮಂಗಳ ವೃಂದಾವನ ದೇವಿಗೆ ಚರಣ ೧: ನೋಡಿದ ಮಾತ್ರಕೆ ದೋಷಸಂಹಾರಿಗೆ ಬೇಡಿದ ವರಗಳ ಕೊಡುವಳಿಗೆ ಮಾಡೆ ವಂದನೆಯನು ಮನುಜರ ಪಾಪದ ಗೂಡನೀಡಾಡುವ ಗುಣವಂತೆಗೆ ಚರಣ ೨: ಮುಟ್ಟೀದ ಮಾತ್ರಕ್ಕೆ ಮುಕ್ತರ ಮಾಡುವ ಮುದದಿಂದುದ್ಧರಿಸುವ ಮುನಿ ವಂದ್ಯೆಗೆ ಕೊಟ್ಟರೆ ನೀರನು ಪೇರಿಗೆ ಕಾಲನ ಮುಟ್ಟಲೇಸದ ಹಾಗೆ ಮಾಳ್ಪಳಿಗೆ ಚರಣ ೩: ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ ಚಿತ್ತವಲ್ಲಭ ಕೃಷ್ಣನ ಹರುಷದಲಿ ಅತ್ಯಂತವಾಗಿ ತಾ ಭವದ ಬೇರ ಕಿತ್ತು ಬಿಸಾಡುವ ಕೋಮಲೆಗೆ ಚರಣ ೪: ಕೋಮಲವಾಗಿದ್ದ ದಳ ಮಂಜರಿಗಳ ಪ್ರೇಮದಿಂದಲಿ ತಂದು ಶ್ರೀ ಹರಿಗೆ ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ ಕಾಮಿತಾರ್ಥವನೀವ ಸದ್ಗುಣೆಗೆ ಚರಣ ೫: ಕಾಷ್ಟವ ತಂದು ಗಂಧವ ಮಾಡಿ ಕೃಷ್ಣಗೆ ನಿಶ್ಠೆಯಿಂದಲಿ ಲೇಪನ ಮಾಳ್ಪರ ಜ್ಯೇಷ್ಠರೆನಿಸಿ ವೈಕುಂಠದಿ ನಿಲಿಸಿ ಸಂತುಷ್ಟರ ಮಾಡುವ ಸೌಭಾಗ್ಯೆಗೆ ಚರಣ ೬: ಅನ್ನವನುಂಡರು ನೀಚರ ಮನೆಯಲ್ಲಿ ಉನ್ನತ ಪಾಪವ ಮಾಡಿದ್ದರೂ ತನ್ನ ದಳವನೊಂದ ಕರ್ಣದಲ್ಲಿಟ್ಟರೆ ಧನ್ಯರ ಮಾಡುವ ದಯವಂತೆಗೆ ಚರಣ ೭: ಸರಸಿಜ ನಾಭನ ಸಲಿಗೆಯ ರಾಣಿಗೆ ಶರಣ ಜನರ ಪೊರೆವ ಸದ್ಗುಣೆಗೆ ತಿರುಪತಿ ನಿಲಯ ಶ್ರೀ ಪುರಂದರ ವಿಟ್ಠಲನ ಚರಣ ಸೇವಕಳಾದ ಚಿನ್ಮಯೆಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು