ಬಿನ್ನಹಕೆ ಬಾಯಿಲ್ಲವಯ್ಯ

ಬಿನ್ನಹಕೆ ಬಾಯಿಲ್ಲವಯ್ಯ

( ರಾಗ ಕಾಂಭೋಜ ಝಂಪೆ ತಾಳ) ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನಲ್ಲಿ ಇರಲಾಗಿ ||ಪ|| ಶಿಶುಮೋಹ ಸತಿಮೋಹ ಜನನಿಜನಕರ ಮೋಹ ರಸಿಕಭ್ರಾತರ ಮೋಹ ರಾಜಮೋಹ ಪಶುಮೋಹ ಭೂಮೋಹ ಬಂಧುವರ್ಗದ ಮೋಹ ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ ಅನ್ನಮದ ಅರ್ಥಮದ ಅಖಿಲವೈಭವದ ಮದ ಮುನ್ನ ಪ್ರಾಯದ ಮದವು ರೂಪಮದವು ತನ್ನ ಸತ್ವದ ಮದವು ಧಾತ್ರಿ ವಶವಾದ ಮದ ಇನ್ನು ತನಗಿದಿರಿಲ್ಲವೆಂದೆಂಬ ಮದದಿಂದ || ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡು ಸುಖವ ಕಾಂಬಾಸೆ ನಷ್ಟ ಜೀವನದಾಸೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು