ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?

ಪಲ್ಲವಿ : ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ? ಅನುಪಲ್ಲವಿ: ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು ಚರಣ: 1: ನಂದಗೋಪನ ಮಂದಿರಗಳ ಸಂದುಗೊಂದಿನಲಿ ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ ಅಂದದಾಕಳ ಕಂದ ಕರುಗಳ ಮಂದೆಮಂದೆಯಲಿ 2: ಶ್ರೀ ಗುರೂಕ್ತ ಸದಾ ಸುಮಂಗಳ ಯೋಗ ಯೋಗದಲಿ ಆಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ ಭಾಗವತರು ಸದಾ ಬಾಗಿ ಪಾಡುವ ರಾಗ ರಾಗದಲಿ 3: ಈ ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ ವೀಚುಕೊಂಡದ ಪುರಂದರ ವಿಟ್ಠಲನ ಲೋಚನಾಗ್ರದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ