ನಡಿರೆ ನಡಿರೆ ನೋಡುವ ಶ್ರೀಕೃಷ್ಣನ

ನಡಿರೆ ನಡಿರೆ ನೋಡುವ ಶ್ರೀಕೃಷ್ಣನ

(ಭೀಮಪಲಾಸ್ ರಾಗ ತೀನ್ ತಾಳ ) ನಡಿರೆ ನಡಿರೆ ನೋಡುವ ಶ್ರೀಕೃಷ್ಣನ ನಡಿರೆ ನಡಿರೆ ನೋಡುವ ||ಧ್ರುವ|| ನಡಿರೆ ನೋಡುವ ಬನ್ನಿ ತುಡುಗ ಶ್ರೀಕೃಷ್ಣನ ಅಡಿಗಳಾಶ್ರಯ ಹಿಡುವ ಮಂಡಲದೊಳು ||೧|| ತುಡುಗತನದಿ ಬಂದು ಕದಿದ ಬೆಣ್ಣೆಯ ಮೆದ್ದು ಒಡನೆ ಗೋಪೇರ ಕಾಡಿದ ನೋಡಮ್ಮ ||೨|| ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ ತಡೆಯದೆ ಧುಮುಕಿದ ಮಡುವಿನೊಳು ||೩|| ಕ್ರೀಡಿಸಿ ಗೋಪೇರ ಉಡುಗೆ ಸೆಳೆದುಕೊಂಡು ಒಡನೆ ಗಿಡವನೇರಿದ ನೋಡಮ್ಮ ||೪|| ಮಾಡದ ಮಾಡಿ ತಾ ಬಿಡದೆ ಬೇಡಿಸಿಕೊಂಡು ಒಡನೆ ಉಡುಗೆ ನೀಡಿದ ನೋಡಮ್ಮ ||೫|| ಬಡವರಿಗಳವಲ್ಲ ಪೊಡವಿಯೊಳಗಿದು ಆಡಿದಾನಂದದಾಟ ನೋಡಮ್ಮ ||೬|| ಹಿಡಿಯಹೋಗಲು ಮೂಢ ಮಹಿಪತಿಯ ನೋಡಿ ಒಡಲ ಹೊಕ್ಕು ಕೂಡಿದ ಒಡೆಯನಮ್ಮ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು