ನಡತೆ ಹೀನನಾದರೇನಯ್ಯ , ಜಗದೊಡೆಯನ ಭಕ್ತಿಯಿದ್ದರೆ ಸಾಲದೆ

ನಡತೆ ಹೀನನಾದರೇನಯ್ಯ , ಜಗದೊಡೆಯನ ಭಕ್ತಿಯಿದ್ದರೆ ಸಾಲದೆ

( ಪೂರ್ವಿ ರಾಗ ಅಷ್ಟತಾಳ) ನಡತೆ ಹೀನನಾದರೇನಯ್ಯ , ಜಗ- ದೊಡೆಯನ ಭಕ್ತಿಯಿದ್ದರೆ ಸಾಲದೆ ಮಿಕ್ಕ ನಡತೆ ||ಪ|| ಪುಂಡರಾ ಪಾಂಡುನಂದನರು ಮತ್ತದರೊಳು ಗಂಡರೈವರು ಭೋಗಿಪರು ಖಂಡಿಸಿದರು ರಣದೊಳಗೆ ಗುರುಹಿರಿಯರ ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ||೧|| ಒಂದೊಂದು ಪರಿ ಬುದ್ಧಿಯ ಪೇಳಿ ಹಿರಣ್ಯಕ ಕಂದನ ನಿರ್ಬಂಧಿಸುತಿರೆ ಅಂದು ಸಾಧಿಸಲು ಕಂಬದ ಬಳಿಯೆ ತನ್ನ ತಂದೆಯನು ಕೊಲಿಸಿದನೆಂಬುವರು ಜನರು ||೨|| ದಾಸಿಯ ಜಠರದೊಳು ಜನಿಸಿದ ವಿದುರ ಸ- ನ್ಯಾಸಿ ಎನಿಸಿಕೊಂಡ ಸಾಸಿರ ನಾಮದೊಡೆಯ ವೇಂಕಟೇಶಾದಿ- ಕೇಶವನಾ ಭಕುತಿಯೊಂದಿದರೆ ಸಾಕು||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು