ನಂಬಿ ಕೆಟ್ಟವರಿಲ್ಲವೋ

ನಂಬಿ ಕೆಟ್ಟವರಿಲ್ಲವೋ

(ರಾಗ ಕಲ್ಯಾಣಿ ಅಟತಾಳ ) ನಂಬಿ ಕೆಟ್ಟವರಿಲ್ಲವೋ, ರಂಗಯ್ಯನ, ನಂಬದೇ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಪಾದವ ನೆನೆಯೆ ಭ- ವಾಂಬುಧಿ ದುಃಖವ ಪರಿಹರಿಸುವ ಕೃಷ್ಣ |ಅ|| ಬಲಿಯ ಪಾತಾಳಕ್ಕೆ ಇಳಿಸಿ ಭಕ್ತ- ಗೊಲಿದು ಬಾಗಿಲ ಕಾಯ್ದನು ಛಲದೊಳು ಅಸುರನ ಶಿರಗಳ ತರಿದು ತ- ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ || ತರಳ ಪ್ರಹ್ಲಾದಗೊಲಿದು ಉಗುರಿನಿಂದ ಹಿರಣ್ಯನುದರ ಸೀಳಿದ ಕರಿರಾಜಗೊಲಿದು ನೆಗಳು ನುಂಗಿರಲಾಗಿ ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ || ಪಾಂಡವರಿಂಗೊಲಿದು ಕೌರವರನ್ನು ತುಂಡು ಛಿದ್ರವ ಮಾಡಿದ ಅಂಡಲೆದು ದ್ರೌಪದಿ ಸಭೆಯೊಳು ಕೂಗೆ ಬಂದು ಕಾಯ್ದ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು