ನಂದಿವಾಹನ ನಳಿನಿಧರ

ನಂದಿವಾಹನ ನಳಿನಿಧರ

ನಂದಿವಾಹನ ನಳಿನಿಧರ ಮೌ ಳೇಂದು ಶೇಖರ ಶಿವ ತ್ರಿಯಂಬಕ ಅಂಧಕಾಸುರ ಮಥನ ಗಜಶಾರ್ದೂಲ ಚರ್ಮಧರ ಮಂದಜಾಸನತನಯ ತ್ರಿಜಗ ದ್ವಂದ್ಯ ಶುದ್ಧಸ್ಫಟಿಕ ಸನ್ನಿಭ ವಂದಿಸುವೆನನವರತ ಪಾಲಿಸೋ ಪಾರ್ವತೀರಮಣ ಫಣಿಫಣಾಂಚಿತಮುಕುಟರಂಜಿತ ಕ್ವಣಿತಡಮರುತ್ರಿಶೂಲಶಿಖಿ ದಿನ ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ ಪ್ರಣತ ಕಾಮದ ಪ್ರಮಥ ಸುರಮುನಿ ಗಣ ಸುಪೂಜಿತ ಚರಣಯುಗ ರಾ ವಣ ಮದವಿಭಂಜನ ಸತತ ಮಾಂಪಾಹಿ ಮಹದೇವ ದಕ್ಷಯಜ್ಞವಿಭಂಜನನೆ ವಿರು ಪಾಕ್ಷ ವೈರಾಗ್ಯಾಧಿಪತಿ ಸಂ ರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು ಯಕ್ಷಪತಿಸಖ ಯಜಿಪರಿಗೆ ಸುರ ವೃಕ್ಷ ವೃಕದನುಜಾರಿ ಲೋಕಾ ಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು
ದಾಸ ಸಾಹಿತ್ಯ ಪ್ರಕಾರ
ಬರೆದವರು