ದಾಸನೆಂತಾಗುವೆನು

ದಾಸನೆಂತಾಗುವೆನು

( ರಾಗ ಕಾಂಭೋಜ. ಝಂಪೆ ತಾಳ) ದಾಸನೆಂತಾಗುವೆನು ಧರೆಯೊಳಗೆ ನಾನು || ವಾಸುದೇವನಲ್ಲಿ ಲೇಶ ಭಕುತಿಯ ಕಾಣೆ ||ಅ|| ಗೂಟನಾಮವ ಹೊಡೆದು ಗುಂಡುತಂಬಿಗೆ ಹಿಡಿದು ಗೋಟಂಚು ಧೋತರ ಮಡಿಯನುಟ್ಟು ದಾಟುಗಾಲಿಡುತ ನಾ ಧರೆಯೊಳಗೆ ಬರಲೆನ್ನ ಬೂಟಕತನ ನೋಡಿ ಭ್ರಮಿಸದಿರಿ ಜನರೆ || ಅರ್ಥದಲ್ಲೆ ಮನಸು ಆಸಕ್ತವಾಗಿದ್ದು ವ್ಯರ್ಥವಾಯಿತು ಜನ್ಮ ವಸುಧೆಯೊಳಗೆ ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ ಸತ್ಯ ಶೌಚಗಳರಿಯೆ ಸಜ್ಜನರು ಕೇಳಿ || ಇಂದಿರೇಶನ ಪೂಜೆ ಎಂದು ಮಾಡಿದ್ದಿಲ್ಲ ಸಂಧ್ಯಾನ ಜಪತಪಗಳೊಂದನರಿಯೆ ಒಂದು ಸಾಧನ ಕಾಣೆ ಪುರಂದರ ವಿಟ್ಠಲನ ದ್ವಂದ್ವ ಪಾದವ ನಂಬಿ ಅರಿತು ಭಜಿಸದಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು