ದಾರಿಯ ತೋರೊ ಮುಕುಂದ

ದಾರಿಯ ತೋರೊ ಮುಕುಂದ

( ರಾಗ ಪೂರ್ವಿ. ಏಕ ತಾಳ) ದಾರಿಯ ತೋರೊ ಮುಕುಂದ , ನಾರಾಯಣ ಹರಿ ಗೋವಿಂದ ||ಪ|| ಬಂದೆನು ನಾನಾ ಜನ್ಮದಲಿ, ಬಹು, ಬಂಧನದೊಳು ಸಿಲುಕಿದೆನೊ ಮುಂದಿನ ಪಯಣದ ಗತಿಯೇನೊ, ಇಂದು ನೀ ತೋರೋ ಇಂದಿರೆರಮಣನೆ || ಉಕ್ಕಿ ಹರಿವ ನದಿಯೊಳಗೆ, ನಾ ,ಸಿಕ್ಕಿದೆ ನಡು ನೀರೊಳಗೆ ಕಕ್ಕುಲತೆಯಿಲ್ಲ ನಿನಗೆ, ಬೇಗ, ನೀ ಕೈ ಪಿಡಿದೆನ್ನ ಸಲಹಯ್ಯ ಬಿಡದೆ || ಕುಕ್ಷಿಯೊಳಗೆ ನೀ ಬಿಟ್ಟು, ಅಯ್ಯ, ಯಾರಿಗೆ ಉಸಿರುವೆನೊ ಚಿಂತಿತದಾಯಕ ಕೇಳೊ, ನಮ್ಮ, ಪುರಂದರವಿಠಲನೆ ದಯವಾಗೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು