ಜೇನು ಬಂದಿದೆ , ಜನರು ಜೇನು ಕೊಳ್ಳಿರೋ

ಜೇನು ಬಂದಿದೆ , ಜನರು ಜೇನು ಕೊಳ್ಳಿರೋ

ರಾಗ ಕಾಂಭೋಜ ಆದಿತಾಳ ಜೇನು ಬಂದಿದೆ , ಜನರು ಜೇನು ಕೊಳ್ಳಿರೋ ||ಪ|| ಮಧುರವಾದ ಕೊಂಬುಜೇನು ಮಾಧವನ ನಾಮಸ್ಮರಣೆ ಸದರವಾದ ಜನರಿಗಿಲ್ಲ ಜನನಮರಣ ಒಯ್ಹಬ್ಯಾಗೆ ಸತ್ತಸಾಯದವರಿಗೆ ಪರ ಇಹಂಗಳೆರಡು ಉಂಟು, ನಮ್ಮ ಪದ್ಮನಾಭನ ನಾಮಸ್ಮರಣೆ ಸದನ ಮಾಡಿಕೊಂಬವರಿಗೆ || ಒಂದು ಅರಿಯ ಒಂದು ಬಲ್ಲ ಅಜ್ಞನಾದ ಅಜಮಿಳನು ಕಂದ ನಾರಗೆಂದು ಕರೆದ ಮಾತ್ರದಿ ಅಂದು ಅವನ ಸಲಹಿದ ಅನಂತ ಶ್ರೀವಾಸುದೇವ ನಂದಗೋಪನ ಸುಂದರಕಂದ ನವನೀತಚೋರನೆಂಬ || ಈರೇಳು ಲೋಕದಲ್ಲಿ ಇರುವ ಕಸ್ತೂರಿರಂಗ ಮಾರುವ ಆರು ಸೇರು ಜೇನುತುಪ್ಪ ಅಗ್ಗವಾಗಿದೆ ಇದ- ನರಿತು ಬೇಗ ನೀವು ಇಂದಿರೇಶನ ಧ್ಯಾನವನ್ನು ಸ್ವಾಮಿ- ಪುರಂದರವಿಠಲಸ್ಮರಣೆಯೆಂಬ ದಿವ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು