ಜಯ ಜಯ ಕರುಣಾಕರ ಕೃಪಾಲ

ಜಯ ಜಯ ಕರುಣಾಕರ ಕೃಪಾಲ

(ಯಮನ್ ರಾಗ ತೀನ್ ತಾಲ್) ಜಯ ಜಯ ಕರುಣಾಕರ ಕೃಪಾಲ ಜಯ ಜಯ ಗುರುಮುನಿಜನ ಪ್ರತಿಪಾಲ ||ಧ್ರುವ|| ರಾಜತೇಜೋನಿಧಿ ರಾಜರಾಜೇಂದ್ರ ರಾಜಿಸುತಿಹ ಮಕುಟಮಣಿ ಸುರೇಂದ್ರ ಸುಜನಹೃದಯ ಸದ್ಗುಣಮಣಿ ಸಾಂದ್ರ ಅಜಸುತ ಸೇವಿತ ಸುಜ್ಞಾನ ಸುಮೋದ ||೧|| ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಪಮ ನಿರ್ಧಾರ ಸಗುಣ ನಿರ್ಗುಣನಹುದೋ ಸಾಕ್ಷಾತ್ಕಾರ ಭಕ್ತವತ್ಸಲ ಮುನಿಜನ ಮಂದಾರ ||೨|| ಧೀರ ಉದಾರ ದಯಾನಿಧಿಪೂರ್ಣ ತಾರಕಸ್ವಾಮಿ ಸದ್ಗುರು ನಿಧಾನ ತರಳ ಮಹಿಪತಿ ಜನೋದ್ಧರಣ ಚರಣಸ್ಮರಣಿ ನಿಮ್ಮ ಸಕಲಾಭರಣ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು