ಜಯಮಂಗಳಂ ನಿತ್ಯ ಶುಭಮಂಗಳಂ

ಜಯಮಂಗಳಂ ನಿತ್ಯ ಶುಭಮಂಗಳಂ

(ರಾಗ ಭೈರವಿ ಛಾಪುತಾಳ) ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ಇಂದೀವರಾಕ್ಷಗೆ ಇಭರಾಜವರದಗೆ ಇಂದಿರಾರಮಣ ಗೋವಿಂದ ಹರಿಗೆ ನಂದನಾಕಂದಗೆ ನವನೀತಚೋರಗೆ ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ || ಕ್ಷೀರಾಬ್ಧಿವಾಸಗೆ ಕ್ಷಿತಿಜನಪಾಲಗೆ ಮಾರನ್ನ ಪಡೆದ ಮಂಗಳಮೂರ್ತಿಗೆ ಚಾರು ಚರಣದಿಂದ ಚೆಲುವೆ ಗಂಗೆಯ ಪಡೆದ ಕಾರುಣ್ಯಮೂರ್ತಿ ಕೌಸ್ತುಭಧಾರಗೆ || ವ್ಯಾಸಾವತಾರಗೆ ವೇದ ಉದ್ಧಾರಗೆ ವಾಸಿತಾನಂತಪದ ಸಕಲೇಶಗೆ ವಾಸುದೇವಾಮೂರ್ತಿ ಪುರಂದರವಿಠಲಗೆ ದಾಸರಾ ಕಾಯ್ವ ರುಕ್ಮಿಣೀರಮಣಗೆ ಜಯಮಂಗಳಂ ನಿತ್ಯ ಶುಭಮಂಗಳಂ||
ದಾಸ ಸಾಹಿತ್ಯ ಪ್ರಕಾರ
ಬರೆದವರು