ಚಿಕ್ಕವನೇ ಇವನು

ಚಿಕ್ಕವನೇ ಇವನು

(ರಾಗ ಮೋಹನಕಲ್ಯಾಣಿ. ಅಟ ತಾಳ) ಚಿಕ್ಕವನೇ ಇವನು , ನಮ್ಮ ಕೈಗೆ ಸಿಕ್ಕದೆ ಓಡುವನು ||ಪ|| ಅಕ್ಕಯ್ಯ ಮಕ್ಕಳು ಹುಟ್ಟುವ ಮರ್ಮವ ಘಕ್ಕನೆ ಎನಕೂಡೆ ಹೇಳು ಹೇಳೆನುತಾನೆ || ಅ.ಪ || ನೀರಿಗೆ ಹೋಗುವಾಗ ನಿಂತುಕೊಂಡು ಯಾರು ಇಲ್ಲದೆ ಕರೆವ ದಾರಿಯಡ್ಡವ ಕಟ್ಟಿ ಕೂಡಿಕೊ ಎನುತಲೆ ಹೋರಾಟವ ಮಾಡಿ ಹೋಗಾಡಿಸಿದನಮ್ಮ ಮೊಸರನ್ನೆ ಕಡೆಯುವಾಗ ಬೆನ್ನಿಲಿ ಬಂದು ಕಣ್ಣಮುಚ್ಚಿ ಕಾಡುವ ಬೆಣ್ಣೆಯ ತಾರೆಂದು ಕುಚಗಳ ಪಿಡಿಯುತ ಬಣ್ಣಿಸಿ ಬಣ್ಣಿಸಿ ಪ್ರಣಯ ಮಾಡಿದನಮ್ಮ ನಿದ್ದೆ ಕಣ್ಣಿಲಿ ನಾನಿದ್ದೆ ಗಂಡನೆಂದು ಬುದ್ಧಿಯಿಲ್ಲದೆ ಕೂಡಿದೆ ಎದ್ದು ನೋಡಲು ಅವನ ಎಡಗಯ್ಯ ಪಿಡಿಯುತ್ತ ಮುದ್ದು ಶ್ರೀ ಪುರಂದರ ವಿಟ್ಥಲ ಕಾಣಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು