ಕಂಡೆ ನಾ ಉಡುಪಿಯ ಕೃಷ್ಣರಾಯನ್ನ

ಕಂಡೆ ನಾ ಉಡುಪಿಯ ಕೃಷ್ಣರಾಯನ್ನ

(ರಾಗ ನೀಲಾಂಬರಿ ಅಟತಾಳ) ಕಂಡೆ ನಾ ಉಡುಪಿಯ ಕೃಷ್ಣರಾಯನ್ನ , ಭೂ- ಮಂಡಲದೊಳಗೆ ಉ- ದ್ದಂಡ ಮೋಹಿಪನ ||ಪ|| ಸಮುದ್ರವ ನಾ ಕಂಡು ಸ್ನಾನಾದಿಗಳ ಮಾಡಿ ಚಂದ್ರಮೌಳೀಶ್ವರನ ಚರಣಕೆರಗಿ ಆಮೇಲೆ ನಾಬಂದು ಅನಂತೇಶ್ವರನ್ನ ಕಂಡು ಹನುಮಂತನ ಪಾಡಿ ಮನದಿ ನಿಲಿಸಿ || ಸುತ್ತು ನದಿಯ ಕಂಡೆ ಸೂರ್ಯನ ಪ್ರಭೆ ಕಂಡೆ ಅಲ್ಲಿದ್ದ ಮಧ್ವಸರೋವರವ ಕಂಡೆ ಮಧ್ವಮತದ ಅಷ್ಟಮುನಿಗಳ ಕಂಡೆ ಪ್ರಸಿದ್ಧವಾಗಿರುವ ಶ್ರೀ ಉಡುಪಿಯ ಕೃಷ್ಣನ ಕಂಡೆ || ಉಂಗುರ ಉಡಿದಾರ ಉಡಿ ಘಂಟೆ ನಾ ಕಂಡೆ , ನಾನು ರಂಗು ಮಾಣಿಕ್ಯದ ನವರತ್ನ ಮಾಲೆ ಕಂಡೆ ದಿಂ ಧಿಮಿ ಧಿಮಿಕೆಂದು ಕುಣಿವ ಕೃಷ್ಣನ ಕಂಡೆ , ನಾನು ಪುರಂದರವಿಠಲನ್ನ ಪದಕಮಲವ ಕಂಡೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು