ಕಂಡೆ ನಾನೊಂದು ಕೌತುಕವ

ಕಂಡೆ ನಾನೊಂದು ಕೌತುಕವ

( ದುರ್ಗಾ ರಾಗ ದಾದರಾ ತಾಳ) ಕಂಡೆ ನಾನೊಂದು ಕೌತುಕವ ||ಧ್ರುವ || ಆಯಿ ಅಜ್ಜನ ನುಂಗಿದ ಕಂಡೆ ನಾಯಿ ಲಜ್ಜೆಯ ಹಿಡಿದುದ ಕಂಡೆ ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ- ಪ್ರದಕ್ಷಿಣೆ ಮಾಡುದು ಕಂಡೆ ||೧|| ಇರುಹೆ ವಿಷ್ಣುನ ನುಂಗಿದ ಕಂಡೆ ನರಿಯು ರಾಜ್ಯನಾಳುದ ಕಂಡೆ ಅರಿಯು ಮರಿಯ ನುಂಗಿದ ಕಂಡೆ ಕುರಿಯಿಂದ ಪರಲೋಕಯೆಯ್ದಿದ ಕಂಡೆ ||೨|| ಇಲಿಯು ಯುಕ್ತಿಯದೋರುದು ಕಂಡೆ ಹುಲಿಯು ಭಕ್ತಿಯ ಮಾಡುದು ಕಂಡೆ ಇಳೆಯೊಳು ಮಹಿಪತಿ ಕಳೇವರದೊಳಿನ್ನು ಮುಕ್ತಿಸಾಧನದೊಂದು ಬೆಡಗನು ಕಂಡೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು