ಕಂಡೆ ಕಂಡೆನು ಕೋದಂಡಪಾಣಿಯನು

ಕಂಡೆ ಕಂಡೆನು ಕೋದಂಡಪಾಣಿಯನು

(ರಾಗ ಸಾವೇರಿ ಆದಿತಾಳ) ಕಂಡೆ ಕಂಡೆನು ಕೋದಂಡಪಾಣಿಯನು ||ಪ|| ಕಂಡು ಈಗ ಕೊಂಡಾಡಿದೆ ನಿನ್ನ ನಾಮವನನುದಿನ ಸ್ಮರಣೆಯ ದಿನದಿನ ಹರುಷದಿ ಮಾಡು ||ಅ|| ಜನಮುನಿ ಋಷಿಗಳು ಘನಪ್ರಮುಖರೆಲ್ಲ ಮನಭೀಷ್ಟಗಳ ಬೇಡಲು ಪೊನ್ನು ಹೆಣ್ಣು ಕೋಟಿ ಕನ್ಯಾದಾನವನು ಸನ್ನಿಧಾನದಿಂದ ಘನ್ನಜನರಿಗಿತ್ತು ಘನಮಹಿಮ ದಶರಥತನಯನು ರಘುಪತಿ ಜನಕನ ಪುರದಿ ತಾ ಮೆರೆದು || ಜನಕನ ಕನ್ನಿಕೆಯ ಧನುವನು ನೆಗಹಿ ಜಾನಕಿಯ ಗೆಲಿದನು ಮನಸಿನ ದೃಢದಲಿ ಎಷ್ಟು ವರ್ಣಿಪೆನು ಸೃಷ್ಟಿಕರ್ತನ ಮಹಿಮೆ ಪುಟ್ಟ ಕಡಗ ಬಿರುದು ಕಂಕಣ ಬೆಟ್ಟದೈತ್ಯರನೆಲ್ಲ ಸೃಷ್ಟಿಮಾಡಿ ಅವರ ಮಟ್ಟ ಮಾಡಿದ ಸ್ವಾಮಿಯು ನೆಂಟಬಂಟರಿಗೆ ಎಲ್ಲಾ - ಭೀಷ್ಟವ ಕೊಟ್ಟ ಕಟ್ಟಾಣೀ ಮುತ್ತು ಪಟ್ಟೆ ಪಟ್ಟಾವಳಿ || ಘಟ್ಟ ಬೆಟ್ಟಗಳನೆಲ್ಲ ಕೊಟ್ಟು ಬಿಟ್ಟು ಹನುಮಂತ ಬೊಟ್ಟಿಲಿಟ್ಟು ಸೇತುವೆಯ ಗಟ್ಟಿ ನಡೆಸಿ ಘಟ್ಟಿಘಟ್ಟಿ ವಾನರರು ಪಟ್ಟಾಮುಟ್ಟಿ ಲಂಕೆಯನ್ನು ದುಷ್ಟ ತುಂಟ ರಾಕ್ಷಸರ ಮುಷ್ಟಿಯಿಂದ ಪ್ರಹರಿಸಿ ಚೆಂಡು ಮುತ್ತನೆ ಹರಕೊಂಡು ಕಾಣಿಕೆಯನು ಚೆಂದಚೆಂದದಿ ನಿಮ್ಮ ಸೇವೆಯು ಕಂಡು ರತ್ನಾಕರ ಹೆಂಡರ ಸಹಿತಲೆ ಬಂದು ನಿಮ್ಮಡಿಗಳ ಸೇರಿದನು || ಖಂಡಿಭಂಡಾರವ ಕಂಡ ಹೆಂಡರುಗಳ ಭಂಡ ಚಂಡಾಲರಾವಣ ಚಂಡಪ್ರಚಂಡಾದಿ ಅಂಡರುಂಡರುಗಳೆಲ್ಲ ಖಂಡಖಂಡನೆಯಾಗಿ ಖಂಡಖಂಡಗಳೆಲ್ಲ ತುಂಡುತುಂಡಾಗಿ ಅವನ ಮುಂಡರುಂಡದ ಮೇಲೆ ಬಂಡಿಯ ನಡೆಸಿದ ದರ್ಭಶಯನನೆ ಉಗ್ರಮೂರುತಿ ಸ್ವಾಮಿ ದಶರಥಕುಲಧನುರ್ಧರನೆ || ದೈತ್ಯೇಂದ್ರನನುಜನಿಗೆ ಲಂಕಾಧಿ- ಪತ್ಯವ ದಯೆಯಿಂದ ನೀ ಕೃಪೆಮಾಡಿದೆ ಧರಣಿಜೆಯೊಡಗೂಡ್ಯಯೋಧ್ಯಾಪುರಕೆ ಬಂದು ಪಟ್ಟಾಭಿಷೇಕಕ್ಕೆ ಕಟ್ಟು ಮಾಡಿಸಲು ಸುಗ್ರೀವ ಅಂಗದನಳ ನೀಲಜಾಂಬಸುರರಾದಿ ಜನರೆಲ್ಲ ಕೈಮುಗಿಯಲು ಸಪ್ತಸಮುದ್ರಜಲ ಪಲ್ಲವದಿಂದಲಿ ತಪ್ಪದೆ ಕೈಗೊಂಡ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು