ಕಂಡು ಧನ್ಯನಾದೆ

ಕಂಡು ಧನ್ಯನಾದೆ

ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನ ಕಣ್ಣಾರೆ ನಾ |ಪ| ಕಂಡು ಧನ್ಯನಾದೆನೋ ಬ್ರಹ್ಮಾಂಡ ನಖದಿಯೊಡೆದ ಹರಿಯ ತಂಡ ತಂಡದಿ ಪೂಜೆಗೊಳುತ ಪಾಂಡವರನು ಸಲಹಿದವನ |ಅ ಪ| ಗೆಜ್ಜೆ ಕಾಲ ಕಡಗವಿಟ್ಟು, ಮಜ್ಜಿಗೆ ಕಡೆಗೋಲ ಪಿಡಿದು ಹಜ್ಜೆ ಪಂಕ್ತಿ ಊಟವುಂಡು ಗುಜ್ಜು ವೇಷ ಧರಿಸಿದವನ|| ಎಂಟು ಮಠದ ಯತಿಗಳು ತನ್ನ ಬಂಟರೆಂದು ಪೂಜೆಗೊಳುತ ಕಂಟಕ ಕಂಸಾದಿಗಳನೆ ದಂಟಿನಂದದಿ ಸೀಳಿದವನ|| ಏಸು ಜನ್ಮದ ಸುಕೃತವೊ ಕಮಲೇಶ ವಿಠಲರಾಯ ತನ್ನ ದಾಸರ ಅಭಿಲಾಷೆಯಿತ್ತು ಕೂಸಿನಂದದಿ ಪೋಷಿಸುವನ||
ದಾಸ ಸಾಹಿತ್ಯ ಪ್ರಕಾರ
ಬರೆದವರು