ಕಂಗೊಳಿಗೊಶವಿಲ್ಲವೆ ರಂಗನ ನೋಟ

ಕಂಗೊಳಿಗೊಶವಿಲ್ಲವೆ ರಂಗನ ನೋಟ

(ರಾಗ ಪೂರ್ವಿ ಅಟತಾಳ) ಕಂಗೊಳಿಗೊಶವಿಲ್ಲವೆ ರಂಗನ ನೋಟ ||ಪ|| ಅಂಗಳದೊಳು ಬೆಳದಿಂಗಳು ತುಂಬಿತು ||ಅ|| ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕುಂದಿಸಲು ಮಂದಮಾರುತದಲಿ ನಿಂದಿರಲಾರೆನೆ ಕಂದರ್ಪತಾಪವು ಹೋಹುದೇನೆ ಹೆಣ್ಣೆ || ಬಂಗಾರ ದೇಹಕೆ ಭಾರವಾಗಿಯಿದೆ ಶೃಂಗರಿಸಿಕೊಳಲಾರಿಗಾಗಿ ಅಂಗಜಶರತಾಪ ತಾಳಲಾರೆನು ನಾನು ಉಂಗುರವು ಕೈಗೆ ಉಚಿತವೇನೆ ಹೆಣ್ಣೆ || ಮುನ್ನ ಪುರಂದರವಿಠಲರಾಯ ಕೂಡಿ ಇನ್ನೂ ಬಾರೆಂದರೆ ಬಾರನೇಕೆ ಅನ್ನಪಾನ ರುಚಿಯಾಗಿ ತೋರಲಿಲ್ಲ ನಿನ್ನಾಣೆ ಕಣ್ಣಿಗೆ ನಿದ್ರೆ ಬಾರದು ಹೆಣ್ಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು