ಒಳ್ಳಿತೀ ಶಕುನ ಫಲವಿಂದೆಮಗೆ

ಒಳ್ಳಿತೀ ಶಕುನ ಫಲವಿಂದೆಮಗೆ

( ರಾಗ ಕಾಮವರ್ಧನಿ/ಪಂತುವರಾಳಿ. ಝಂಪೆ ತಾಳ) ಒಳ್ಳಿತೀ ಶಕುನ ಫಲವಿಂದೆಮಗೆ ||ಪ|| ಲಕ್ಷ್ಮೀವಲ್ಲಭನ ಸೇವೆ ದೊರಕೊಂಬುದೇ ರಮಣಿ (/ ಜಲಜನಾಕ್ಷನೊಲುಮೆಯಾಗುವದು ಕೇಳ್ ಕೆಳದಿ) ||ಅ|| ವಾಮ ಗರುಡನ ನೋಡು ವಾಯಸದ ಬಲ ನೋಡು ಕೋಮಲಾಂಗಿಯರೇರ ಉದಕುಂಭ ನೋಡು ಸಾಮಾನ್ಯವಲ್ಲ ಗೌಳಿ ಬಲಕೆ ನುಡಿಯುತಿದೆ ಪ್ರೇಮದಿ ಮಧುರ ವಚನ ಕೇಳೆ ಕೆಳದಿ || ಭೇರಿ ಶಂಖವು ಘಂಟಾವಾದ್ಯವಾಗುತಲಿದೆ ಕ್ಷೀರ ಘೃತಫಲಪುಷ್ಪ ಎದುರಾದುವು ಭಾರದ್ವಾಜ ಪಕ್ಷಿ ಎಡವಾಗುವುದು ಕಂಡ್ಯ ತೋರುತಿವೆ ಶುಭಶಕುನಗಳಿದಕೊ || ನೋಡು ವಿಪ್ರದ್ವಯರು ಎದುರಾಗುತೈದಾರೆ ಕೈ ಕೂಡುವುದು ಮನದ ವಾಂಛಲ್ಯವೆಲ್ಲ ಬೇಡಿದ್ವರಗಳನೀವ ಪುರಂದರವಿಠಲನ ಕೂಡಿ ಇಹಪರ ಸುಖದಿಂದಿರುವ ರಮಣಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು