ಒಮ್ಮೆ ನೆನೆಯಲು ನಮ್ಮ ದೇವ

ಒಮ್ಮೆ ನೆನೆಯಲು ನಮ್ಮ ದೇವ

( ರಾಗ ಯದುಕುಲಕಾಂಭೋಜ ಆದಿತಾಳ) ಒಮ್ಮೆ ನೆನೆಯಲು ನಮ್ಮ ದೇವ ||ಪ|| ಗಮ್ಮನೆ ಓಡಿಬರುವ ಬೊಮ್ಮನಯ್ಯನು ಬೇಗ ||ಅ|| ಪಂಡರಿನಾಥನು ಪಾಂಡವರ ಮಿತ್ರನು ಕೊಂಡಾಡುವರ ಮನೆ ತೊಂಡನಾಗುವನು || ವಯ್ಯಾರ ನಡೆಗಾರ ಹೊಯ್ಲು ಮಾಡುವ ಚೋರ ಮುಯ್ಯಕ್ಕೆ ಮುಯ್ಯ ತೆಗೆವ ಅಯ್ಯನಯ್ಯ || ಉತ್ತಮ ಪುರುಷನು ಮತ್ತೇನೆಂಬೆ ನಾನು ಎತ್ತ ನೋಡಿದರು ಅತ್ತತೋರುತಲಿರ್ಪ || ಸಚ್ಚಿದಾನಂದ ರೂಪ ಹೆಚ್ಚಾಗಿ ಸಲಹುವ ಮುಚ್ಚಾಗಿ ಭಜಿಪರ ಅಚ್ಯುತಾನಂತ ಕೃಷ್ಣ || ಸಂಕರ್ಷಣ ನಾಮ ತಂದೆ ಪುರಂದರವಿಠಲನ ಸಂಕೀರ್ತನೆ ಮಾಡೆ ಸುಂಕವ ಕೇಳ ಯಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು