ಏಳಯ್ಯ ಬೆಳಗಾಯಿತು (೨)

ಏಳಯ್ಯ ಬೆಳಗಾಯಿತು (೨)

(ಉದಯರಾಗ ಝಂಪೆತಾಳ) ಏಳಯ್ಯ ಬೆಳಗಾಯಿತು ||ಪ|| ಏಳು ಹೃಷಿಕೇಶ ಏಳು ರವಿಶಶಿವಂದ್ಯ ಏಳು ಪಶುಗಳ ಕಾಯ್ದೆ ಪಾಲಿಸಿದೆ ಗೋಕುಲವ ಏಳು ಯಶೋದೆಸುತನೆ ಏಳು ಭೂಸತಿರಮಣ ||ಅ|| ಪಚ್ಚೆ ಮುಡಿವಾಳಗಳು ಅಚ್ಚ ಶಾವಂತಿಗೆಯು ಬಿಚ್ಚನೆ ಜಾಜಿ ಸಂಪಿಗೆಯು ಪುನ್ನಾಗ ಕುಕ್ಷಿಯೊಳು ಈರೇಳು ಭುವನವನು ಸಲಹುವೆ ಅಚ್ಚ ಜಾಣೆಯರು ಶ್ರೀಗಂಧಪುನುಗು ಕಸ್ತೂರಿ ಬಿಚ್ಚನೆ ಬೆಳೆಯೆಲೆಯ ಪಿಡಿದು ನಿಂತಿದ್ದಾರೆ ಮುಚ್ಚುತಿವೆ ತಾರೆಗಳು ಹೆಚ್ಚುತಿದೆ ರವಿಕಿರಣ ಅಚ್ಯುತನೆ ಉಪ್ಪವಡಿಸೊ || ಚೆನ್ನೆಯರು ಚದುರಸಂಪನ್ನೆಯರು ಪನ್ನೀರು ಪೊನ್ನ ತಂಬಿಗೆಗಳಲಿ ಪಿಡಿದು ನಿಂತಿದ್ದಾರೆ ಮನ್ನಣೆಯ ನಾರದರು ಮೊದಲಾದ ಸುರನಿಕರ ನಿನ್ನ ಮಹಿಮೆಯ ಪಾಡಿ ನಲಿಯುತಿರೆ ಇನ್ನು ಉದಯದ ಸಮಯ ಸಿರಿಯರಸ ಚೆನ್ನಿಗನೆ ಉಪ್ಪವಡಿಸೊ || ದೇವದುಂದುಭಿ ಮೊಳಗೆ ನಿಮ್ಮ ಓಲಗದ ಸಂಭ್ರಮಕೆ ದೇವಾದಿದೇವತೆಗಳೆಲ್ಲ ನೆರೆದು ದೇವಪ್ರಹ್ಲಾದ ಬಲಿ ಮುಖ್ಯರನು ಕಾಯ್ದೆಂದು ದೇವಬ್ರಹ್ಮನ ಪಡೆದ ದೇವಗಂಗೆಯ ಪಿತನೆ ದೇವದೇವೋತ್ತಮನೆ ದೇವಾದಿದೇವನೇ ದೇವಪುರಂದರವಿಠಲನೆ ಉಪ್ಪವಡಿಸೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು