ಏನೇನು ಮಾಡಿದರೇನು ಫಲವಯ್ಯ

ಏನೇನು ಮಾಡಿದರೇನು ಫಲವಯ್ಯ

( ರಾಗ ಮೋಹನ. ತ್ರಿಪುಟ ತಾಳ) ಏನೇನು ಮಾಡಿದರೇನು ಫಲವಯ್ಯ||ಪ|| ಭಾನುಕೋಟಿ ತೇಜ ಶ್ರೀನಿವಾಸನ್ನ ಭಜಿಸದೆ ||ಅ|| ಹಲವು ಓದಿದರೇನು ಕೆಲವು ಕೇಳಿದರೇನು ಜಲದೊಳಗೆ ಮುಳುಗಿ ಕುಳಿತಿದ್ದರೇನು ಛಲವಾಗಿ ಮುಸುಕಿಟ್ಟು ಬೆರಳನೆಣಿಸಿದರೇನು ಚೆಲುವ ದೇವನೊಳು ಎರಕವಿಲ್ಲದ ತನಕ || ಅನ್ನ ಜರಿದು ಅರಣ್ಯ ಚರಿಸಿದರೇನು ಉನ್ನತ ವ್ರತಗಳಾಚರಿಸಿದರೇನು ಚೆನ್ನೆಗಾತಿಯರ ಸಂಗ ಬಿಟ್ಟು ಇದ್ದರೇನು ಗಾನಲೋಲನಲ್ಲಿ ಎರಕವಿಲ್ಲದನಕ || ಬತ್ತಲೆ ತಿರುಗಿ ಅವಧೂತನೆನಿಸಿದರೇನು ತತ್ವವಾಕ್ಯಂಗಳ ಪೇಳಿದರೇನು ಚಿತ್ತಜನಯ್ಯ ಶ್ರೀಪುರಂದರವಿಠಲನ್ನ ಚಿತ್ತದೊಳಿರಿಸಿ ಒಲಿಸಿಕೊಳ್ಳುವತನಕ(/ಒಲಿಸಿಕೊಳ್ಳದತನಕ) ||
ದಾಸ ಸಾಹಿತ್ಯ ಪ್ರಕಾರ
ಬರೆದವರು