ಏನು ಮಾಡಿದರೇನು ಭವ ಹಿಂಗದು

ಏನು ಮಾಡಿದರೇನು ಭವ ಹಿಂಗದು

( ರಾಗ ಮುಖಾರಿ. ಝಂಪೆ ತಾಳ) ಏನು ಮಾಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ||ಪ|| ಅರುಣೋದಯದಲೆದ್ದು ಅತಿ ಸ್ನಾನಗಳ ಮಾಡಿ ಬೆರಳನೆಣಿಸಿದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಾಕಟಾಕ್ಷವಾಗದನಕ || ಶ್ರುತಿ ಶಾಸ್ತ್ರ ಪುರಾಣಗಳನೋದಿ ಬೆಂಡಾದೆ ಅತಿ ಶೀಲಗಳನೆಲ್ಲ ಮಾಡಿ ದಣಿದೆ ಗತಿಯ ಪಡೆವೆನೆಂದು ಕಾಯ ದಂಡಿಸಿದೆನೋ ರತಿಪತಿಪಿತ ನಿನ್ನ ದಯವಾಗದನಕ || ಧ್ಯಾನವನು ಮಾಡಿದೆನು ಮೌನವನು ತಾಳಿದೆ ಮ- ಹಾನು ಪುರುಷಾರ್ಥಕೆ ಮನವನಿಕ್ಕಿ ಅನಾಥಬಂಧು ಶ್ರೀ ಪುರಂದರವಿಠಲನ ಧ್ಯಾನಿಸುವರೊಡಗೂಡಿ ನೆಲೆಗಾಣದನಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು