ಏನು ಬೇಕು ಜೋಗಿಗೆ ? ಏನೂ ಬೇಡ

ಏನು ಬೇಕು ಜೋಗಿಗೆ ? ಏನೂ ಬೇಡ

( ಪೂರ್ವಿ ರಾಗ , ಮಟ್ಟತಾಳ) ಏನು ಬೇಕು ಜೋಗಿಗೆ ? ಏನೂ ಬೇಡ ||ಪ|| ರಾಗಭೋಗ ಸರ್ವವನ್ನು ರಾಗವೆಂಬ ಕಾಗೆಗಳನು ಕೂಗುವೆಂಬ ಕೋಳಿಯನ್ನು ತೇಗಿ ಮೂಗನಾದ ಬಳಿಕ ||೧|| ಪಂಚಕಂಗಳನ್ನು ಸುಟ್ಟು ಪಂಚ ಫಕೀರನು ಆಗಿ ಪಂಚ ಪಂಚವೆಂಬ ಅರಿಗಳ ಹಂಚಿನಲಿ ಹುರಿದು ತಿಂದ ||೨|| ಅಷ್ಟ ದಿಕ್ಪಾಲಕರನ್ನು ಒಟ್ಟುಗೂಡಿ ಮದವನೆಲ್ಲ ಮೆಟ್ಟಿ ಸಿಂಹನಾಗಿ ಸವಿದ ದಿಟ್ಟ ಗಂಡಭೇರುಂಡಗೆ ||೩|| ಆರು ಬಣ್ಣ ತೋರಿ ಮೆರೆವ ಕಾರಣಾರ್ಥ ಪಕ್ಷಿಗಳನು ತೋರಿ ಹಾರುತಿರಲು ಬಡಿದು ಬೇರು ಸಹಿತ ನುಂಗಿದಂಥ ||೪|| ಏಳು ಹೆಡೆಯ ಸರ್ಪವನ್ನು ಕೋಳಿ ಕೂಗೆ ಅದನು ಕಂಡು ಜೋಳು ಮುಟ್ಟಿ ಶರಣು ಕಂಡೂ ತೋಳನನ್ನು ತಿಂದು ಬಿಟ್ಟ ||೫|| ಮೂರು ನಾಮ ಮೂರು ನೇಮ ಮೀರಿದಂಥ ಶಿರಸದವನ ಮೇರುವ ತುದಿಗೇಳು ಕಟ್ಟಿ ಮೂರು ನದಿಯ ದಾಟಿದಂಥ ||೬|| ಜಾತಿ ನೀತಿ ಗೋತ್ರ ಕೆಟ್ಟು ಶಾಸ್ತ್ರಶೂನ್ಯ ಜ್ಯೋತಿ ಲಿಂಗ ಜಾತಿಯಾದ ರೂಢ ಶಾಂತ ಪಾತ್ರನಾಗಿ ಸಿದ್ಧನಾದ ||೭|| --- ವಿಜಯನಗರ ಪ್ರೌಢದೇವರಾಯನ ಕಾಲದ ಕರಸ್ಥಲದ ನಾಗಿದೇವನ ಸ್ವರವಚನ
ದಾಸ ಸಾಹಿತ್ಯ ಪ್ರಕಾರ
ಬರೆದವರು