ಏನು ಬರೆದೆಯೊ ಬ್ರಹ್ಮ

ಏನು ಬರೆದೆಯೊ ಬ್ರಹ್ಮ

( ರಾಗ ತೋಡಿ. ಆದಿ ತಾಳ) ಏನು ಬರೆದೆಯೊ ಬ್ರಹ್ಮ ಎಷ್ಟು ನಿರ್ದಯವೋ ||ಪ|| ಅಭಿ- ಮಾನವನು ತೊರೆದು ಪರರನ್ನು ಬೇಡುವುದ ||ಅ|| ಗೇಣೊಡಲು ಪೊರೆವುದಕೆ ಪೋಗಿ ಪರರನು ಪಂಚ- ಬಾಣಸಮರೂಪ ನೀನೆಂದು ಪೋಗಳೆ ಆನೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು ಗಾಣ ತಿರುಗುವ ಎತ್ತಿನಂತೆ ಬಳಲುವುದ || ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು ಸೊಲ್ಲು ಸೊಲ್ಲಿಗೆ ಅವರ ಕೊಂಡಾಡುತ ಇಲ್ಲ ಈ ವೇಳೆಯಲಿ ತಿರುಗಿ ಬಾರೆಂದೆನಲು ಅಲ್ಲವನು ತಿಂದ ಇಲಿಯಂತೆ ಕೊರಗುವುದ || ಹಿಂದೆ ಬರೆದೆ ಬರೆಹ ಹೇಗಾದರಾಗಲಿ ಮುಂದೆನ್ನ ವಂಶದಲಿ ಜನಿಸುವರ ಕಾಯೋ ಸಂದೇಹಿಸಲು ಬೇಡ ಪುರಂದರವಿಠಲ ಕಂದರ್ಪ ಜನಕ ಉಡುಪಿಯ ಕೃಷ್ಣನಾಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು