ಏನಾಯಿತೋ ನಿನಗೆ ಶ್ರೀಹರಿ

ಏನಾಯಿತೋ ನಿನಗೆ ಶ್ರೀಹರಿ

( ರಾಗ ಶಂಕರಾಭರಣ. ಆದಿ ತಾಳ) ಏನಾಯಿತೋ ನಿನಗೆ ಶ್ರೀಹರಿ ಹರಿ ||ಪ|| ನಾನಿನ್ನೇನು ಮಾಡಲಿ ಕಂದ ||ಅ|| ಅಂಗಳದೊಳಗಾಡೋ ಗೋಪೀಕಂದಗೆ ಗ್ರಹ ಸೋಕಿ ಅಂಗಾರನಿಟ್ಟಳು ಗೋಪಿ ತಾ ರಕ್ಷೆಯ ಕಟ್ಟಿದಳು ಅಂಗನೆ ಹರಿಯ ಕಂಡು ಗೋಪಿ ತಾ ಕಂಗೆಟ್ಟಳು ಆಗ || ಧೂಪ ಕಾಣಿಕೆಯನು ಕೊಂಡು ನೆರೆಮನೆ ಜಾಣೇರ ಜಾಣೆ ರಂಗಗೆ ಪೇಳೇ ಆಕಾಶದ ಬೊಮ್ಮನೆ ಸೋಕಿಹುದು ಬೊಮ್ಮಗೆ ಆಹುತಿಯಕೊಟ್ಟರೆ ಗುಣವಾಗೋದು ನಿನ್ನ ಕಂದಗೆ || ಪೂತನಿಯ ಮೊಲೆಯನುಂಡು ಕೃಷ್ಣಯ್ಯ ತಾ ಭೀತಿಗೊಂಡನು ತಾಯೆ ಐದು ಮೊಘೆಯ ತುಪ್ಪ ಬೇಗನೆ ಆಹುತಿಯ ಕೊಟ್ಟರೆ ಗುಣವಾಗೋದು ನಿನ್ನ ಕಂದಗೆ || ಐದು ಮಣ ಗೋಧಿಟ್ಟು ಐದು ಮೊಗೆಯ ತುಪ್ಪ ಪಡಿವವಳೆ ಬಡಿಸುತಿರೆ ಕೃಷ್ಣಯ್ಯ ತಾ ಕಡೆಗಣ್ಣಿನಲಿ ನೋಡಿ ಬಡಿವಾಣ(ಹರಿವಾಣ?) ಬಳದುಂಡ ಬೊಮ್ಮ ಬಾಯಲಿ ಮಣ್ಣೆಂದ || ಸೃಷ್ಟಿಯೊಳಗಿಂಥಾ ಸ್ವಾಮಿ ಇಷ್ಟ ಮೂರುತಿ ಕಾಣೆ ತೊಟ್ಟಿಲೊಳಗೆ ಮಲಗಿದ್ದ ಶ್ರೀಪುರಂದರವಿಠಲ ನಗುತಿದ್ದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು