ಎಂಥವನೆಂಥವನೆ ರಂಗಯ್ಯ

ಎಂಥವನೆಂಥವನೆ ರಂಗಯ್ಯ

ಪಲ್ಲವಿ: ಎಂಥವನೆಂಥವನೆ ರಂಗಯ್ಯ ಎಂಥವನೆಂಥವನೆ ಚರಣ: ೧: ಆಗಮವನು ತಂದವನೆ ರಂಗ ಬೇಗದಿ ಗಿರಿಯ ಪೊತ್ತವನೆ ಮೂಗಿಂದ ಭೂಮಿಯನೆತ್ತಿದನೆ ಶಿಶು ಕೂಗಲು ಕಂಭದಿಂದೊದಗಿದನೆ ಕೃಷ್ಣ ೨: ಧರಣಿಯ ಈರಡಿ ಮಾಡಿದನೆ ಭೂ- ಸುರನಾಗಿ ಪರಶುವ ಧರಿಸಿದನೆ ಭರದಿ ಕೋಡಗ ಹಿಂಡ ಕೂಡಿದನೆ ಫಣಿ- ಶಿರದಲಿ ಕುಣಿಕುಣಿದಾಡಿದನೆ ರಂಗ ೩: ಉಟ್ಟಿದ್ದ ಬಟ್ಟೆಯ ಬಿಸುಟಿಹನೆ ರಂಗ ದಿಟ್ಟ ತೇಜಿಯನೇರಿ ಮೆರೆಯುವನೆ ದುಷ್ಟರನೆಲ್ಲ ಸಂಹರಿಸಿದನೆ ನಮ್ಮ ದಿಟ್ಟ ಪುರಂದರ ವಿಟ್ಠಲನೆ ಕೃಷ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು