ಋತುಮತಿ ಬಿಡು ಬಿಡು ಸೆರಗ

ಋತುಮತಿ ಬಿಡು ಬಿಡು ಸೆರಗ

( ರಾಗ ಯದುಕುಲಕಾಂಭೋಜಿ. ಅಟ ತಾಳ) ಋತುಮತಿ ಬಿಡು ಬಿಡು ಸೆರಗ, ನೀ ಋತುವಾಧರೆ ನಾ ರತಿ ಕೊಡ ಬರುವೆ ಅಣ್ಣಯ್ಯ ಕೃಷ್ಣ ಬಿಡೊ ಸೆರಗ, ನಾ ಅಣ್ಣನಲ್ಲವೆ ನಿನ್ನ ಅಣ್ಣನ ಭಾವ ||೧|| ಭಾವಯ್ಯ ಕೃಷ್ಣ ಬಿಡೊ ಸೆರಗ, ನಾ ಭಾವನಲ್ಲವೆ ನಿನ್ನ ಭಾವನ ತಮ್ಮ ತಮ್ಮಯ್ಯ ಕೃಷ್ಣ ಬಿಡೊ ಸೆರಗ, ನಾ ತಮ್ಮನಲ್ಲವೆ ನಿನ್ನ ತಮ್ಮನ ಬೀಗ ||೨|| ಬೀಗಯ್ಯ ಕೃಷ್ಣ ಬಿಡೊ ಸೆರಗ, ನಾ ಬೀಗನಲ್ಲವೆ ನಿನ್ನ ಬೀಗನ ಬೀಗ ಮಾವಯ್ಯ ಕೃಷ್ಣ ಸೆರಗ ನಾ, ಮಾವನಲ್ಲವೆ ನಿನ್ನ ಮಾವನ ಮಗನು ||೩|| ಕಂದಯ್ಯ ಕೃಷ್ಣ ಬಿಡೊ ಸೆರಗ, ನಾ ಕಂದನಲ್ಲವೆ ನಿನ್ನ ಕಂದನ ತಂದೆ ಗಂಡಯ್ಯ ಕೃಷ್ಣ ಬಿಡೊ ಸೆರಗ, ನಾ ಗಂಡನಲ್ಲವೆ ನಿನ್ನ ಗಂಡನ ಮಿಂಡ ||೪|| ಅರಸಯ್ಯ ಕೃಷ್ಣ ಬಿಡೊ ಸೆರಗ, ನಾ ಅರಸನಲ್ಲವೆ ನಿನ್ನ ಸರಸಕ್ಕೆ ಬಂದೆ ಗೊಲ್ಲರ ಗೋಕುಲದೊಳಗೆ ಎನ್ನ ಪುಲ್ಲಲೋಚನ ಶ್ರೀ ಪುರಂದರವಿಠಲ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು