ಋಣವೆಂಬ ಸೂತಕವು

ಋಣವೆಂಬ ಸೂತಕವು

(ರಾಗ ಮುಖಾರಿ ಅಟತಾಳ) ಋಣವೆಂಬ ಸೂತಕವು ಬಹು ಬಾಧೆ ಪಡಿಸುತಿದೆ ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ ಕೊಟ್ಟವರು ಬಂದೆನ್ನ ನಿಷ್ಠುರಗಳನಾಡಿ ಕೆಟ್ಟ ಬೈಗಳ ಬೈದು ಮನದಣಿಯಲು ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ ಅವನ ಒಡೆವೆಯ ತಂದು ದಾನ ಧರ್ಮವ ಮಾಡೆ ಅವಗಲ್ಲದೆ ಪುಣ್ಯ ಇವಗ್ಯಾವದು ಅವನ ಒಡವೆಗಳಿಂದ ತೀರ್ಥ ಯಾತ್ರೆಯ ಮಾಳ್ಪ ಇವನ ಜೀವನ ಪಾಡಿಗೆತ್ತಿನಂದದಲಿ ಆಳಿದೊಡೆಯನ ಮಾತು ಕೇಳಿ ನಡೆಯಲುಬಹುದು ಊಳಿಗವ ಮಾಡಿ ಮನದಣಿಯಬಹುದು ಕಾಳಗದಿ ಪೊಕ್ಕು ಕಡಿದಾಡಿ ಜೈಸಲುಬಹುದು ಪೇಳಲಳವಲ್ಲ ಋಣದವಗೊಂದು ಸೊಲ್ಲ ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ ಮೃತ್ಯು ಸೂತಕವು ಹನ್ನೊಂದು ದಿನಕೆ ಮತ್ತೆ ಋಣ ಸುತಕವು ಜನ್ಮಜನ್ಮಾಂತರಕೆ ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು ಬಂಧುಬಳಗದ ಮುಂದೆ ಬಹುಮಾನವು ಹೋಗಿ ಅಂದವಳಿದೆನೊ ಈ ವಿಧ ಋಣದೊಳು ಇಂದಿರಾರಮಣನೆ ಶ್ರೀಪುರಂದರವಿಠಲನೆ ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ
ದಾಸ ಸಾಹಿತ್ಯ ಪ್ರಕಾರ
ಬರೆದವರು