ಉಬ್ಬದಿರು ಉಬ್ಬದಿರು

ಉಬ್ಬದಿರು ಉಬ್ಬದಿರು

( ರಾಗ ಕಾಂಭೋಜ ಝಂಪೆತಾಳ) ಉಬ್ಬದಿರು ಉಬ್ಬದಿರು ಎಲೆ ಮಾನವ ||ಪ|| ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ ||ಅ|| ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ ಭೋಗಭಾಗ್ಯಗಳೆಂದು ಬಳಲಲೇಕೋ ನಾಗಹೆಡೆ ನೆರಳಲ್ಲಿ ನಡುಗೊ ಕಪ್ಪೆಯ ರೀತಿ ಕೂಗಿ ಚೀರಿದರೆ ನಿನ್ನಾಗ ಕೇಳುವರೆ || ಮಾಳಿಗೆ ಮನೆಯೆಂದು ಮತ್ತೆ ಸತಿ ಸುತರೆಂದು ಜಾಳಿಗೆ ಧನ ಧಾನ್ಯ ಪಶುಗಳೆಂದು ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು ಗಾಳಿಗಿಕ್ಕಿದ ದೀಪ ಬಾಳು ಬದುಕೆಲ್ಲ || ಅಸ್ಥಿರದ ಭವದೊಳಗೆ ಅತಿಶಯಗಳೆಣಿಸದಲೆ ವಸ್ತು ಇದರಲಿ ಕೇಳು ವೈರಾಗ್ಯವ ವಿಸ್ತಾರಮಹಿಮ ಶ್ರೀ ಪುರಂದರವಿಠಲನ ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು