ಈತನೀಗ ವಾಸುದೇವನು

ಈತನೀಗ ವಾಸುದೇವನು

ಈತನೀಗ ವಾಸುದೇವನು ಲೋಕದೊಡೆಯ| ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ| ಧನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನ ಅನುಜೆಯಾಳಿದವನ ಶಿರವ ಕತ್ತರಿಸುತಾ| ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದಾ ರುಕ್ಮನ ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ|| ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ| ಧಾರಿಣಿಯ ಪದದೊಳಂಗಿ ಚರಣ ಭಜಕ ನರನ ಕಾಯ್ದಾ ಭಾವಕಲ್ಪನಾದದೇವ ಈತ ನೋಡಿರೋ|| ವ್ಯೋಮಕೇಶಯಿಪ್ಪದೆಸೆಯ ಆ ಮಹಾಮಹಿಮೆಯುಳ್ಳ ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ| ಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದಾ ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ||
ದಾಸ ಸಾಹಿತ್ಯ ಪ್ರಕಾರ
ಬರೆದವರು