ಇಂದಿರಾರಮಣ ಗೋವಿಂದ

ಇಂದಿರಾರಮಣ ಗೋವಿಂದ

(ರಾಗ ಆರಭಿ ಆದಿತಾಳ ) ಇಂದಿರಾರಮಣ ಗೋವಿಂದ ನಿನ್ನಯ ಪಾದ- ದ್ವಂದ್ವವೆನಗೆ ಸಾಕೆಲೊ ||ಪ|| ಅಂದು ಬ್ರಹ್ಮಾಂಡವ ಸೀಳಿದಂಥ ಪಾದ ಎಂದೆಂದು ಭಕುತರು ಲಾಲಿಸುವ ನಿನ್ನ ||ಅ|| ನಾರಾಯಣ ನಿನ್ನ ನಾಮವು ಅಜಮಿಳನ ಘೋರಪಾಪವ ಅಟ್ಟಿತೊ ಸಾರಿ ನಿನ್ನನು ಭಜಿಪ ಚಾರು ಭಕ್ತರಿಗೆ ಕೋರಿದ ವರಗಳ ನೀಡುವ ದಾತನೆ || ಮುನಿಗಳು ತಮ್ಮ ತಮ್ಮ ಮನವನೆ ನಿಲ್ಲಿಸಿ ಘನತರ ಮಹಿಮ ನಿನ್ನ ನೆನೆವುತ್ತಿರಲು ಅವರ ಕಾವಲಾಗಿರುತಿದ್ದೆ ಅನಾಥರಕ್ಷಕ ಕಾರುಣ್ಯಮೂರುತಿ || ಒಂದೆ ಮೂರುತಿಯಾಗಿ ಎಂದು ಇರುವನಾಗಿ ಪೊಂದಿದೆ ಅನಂತ ರೂಪವೆಲ್ಲ ಒಂದು ಅರಿಯದ ಎನ್ನ ಕಾಯಬೇಕೋ ಅಣ್ಣ ತಂದೆ ಪುರಂದರ ವಿಠಲ ರಾಯನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು